Mysore
22
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಹಾಸನದಲ್ಲಿ ಕೊಳೆ ರೋಗಕ್ಕೆ ತುತ್ತಾದ ಕಾಫಿ ಬೆಳೆ: ಕಂಗಾಲಾದ ಅನ್ನದಾತರು

ಹಾಸನ: ಹಾಸನದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಕಾಫಿ ಬೆಳೆ ಕೊಳೆರೋಗಕ್ಕೆ ತುತ್ತಾಗಿದ್ದು, ಅನ್ನದಾತರು ತೀವ್ರ  ಕಂಗಾಲಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ರೈತರು ಕೂಡ ಕಂಗಾಲಾಗಿದ್ದಾರೆ.

ಈ ಬಾರಿ ಕಾಫಿ ಬೆಳೆಯಲ್ಲಿ ಉತ್ತಮ ಆದಾಯ ಸಿಗಲಿದೆ ಎಂಬ ಆಸೆಯಲ್ಲಿದ್ದ ಅನ್ನದಾತರಿಗೆ ಮಳೆರಾಯ ತಣ್ಣೀರು ಎರಚಿದ್ದಾನೆ.

ಧಾರಾಕಾರ ಮಳೆಯಿಂದ ಕಾಫಿ ಬೆಳೆಗೆ ಕೊಳೆರೋಗ ಅಂಟಿದ್ದು, ಗಿಡದಲ್ಲಿ ಕಾಯಿಗಳು ಸಂಪೂರ್ಣ ಉದುರಿ ಹೋಗಿವೆ. ತೋಟದ ತುಂಬೆಲ್ಲಾ ನೆಲದ ಮೇಲೆ ಕಾಫಿ ಹಣ್ಣಾಗುವ ಮೊದಲೇ ಕಾಯಿಗಳಲ್ಲೇ ಉದುರಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ.

ಒಂದೆಡೆ ಮೇ-ಜೂನ್‌ನಲ್ಲಿ ಮಳೆ ರೈತರಿಗೆ ತೀವ್ರ ಖುಷಿ ತಂದಿತ್ತು. ಆದರೆ ಜುಲೈ ವೇಳೆಗೆ ದಾಖಲೆಯ ಧಾರಾಕಾರ ಮಳೆ ಸುರಿದಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಈ ಬಾರಿ ಕಾಫಿ ಬೆಳೆಯಿಂದ ಏನೂ ಪ್ರಯೋಜನವಿಲ್ಲ. ಹಣ್ಣಾಗುವ ಮೊದಲೇ ಕಾಫಿ ಕಾಯಿಗಳು ಉದುರಿ ಹೋಗಿವೆ. ಹೀಗಾಗಿ ನಮಗೆ ಭಾರೀ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಾಫಿ ಬೆಳೆಗಾರರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 

 

Tags: