Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕುಲದೇವರಿಗೆ ಪೂಜೆ ಸಲ್ಲಿಸಿದ ನಿಖಿಲ್‌ ಕುಮಾರಸ್ವಾಮಿ ದಂಪತಿ

ಹಾಸನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್‌ ಕುಮಾರ್‌ಸ್ವಾಮಿ ಅವರಿಂದು ಕುಲದೇವರ ಮೊರೆ ಹೋಗಿದ್ದು, ಪತ್ನಿ ರೇವತಿಯೊಡನೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹುಟ್ಟೂರಾಗಿರುವ ಹರದನಹಳ್ಳಿಯಲ್ಲಿ ಇಂದು ಕುಲದೇವರಾಗಿರುವ ದೇವೇಶ್ವರನಿಗೆ ಪತ್ನಿ ರೇವತಿ ಹಾಗೂ ಮಗನೊಡನೆ ಬಂದು ನಿಖಿಲ್‌ ಕುಮಾರಸ್ವಾಮಿ ಪೂಜೆ ನೆರವೇರಿಸಿದ್ದಾರೆ.

ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ ದೇವರಿಗೆ ಪೂಜೆ ಸಲ್ಲಿಸುವುದು ಪತ್ನಿ ರೇವತಿಯವರ ಆಸೆಯಾಗಿತ್ತು. ಈ ಕಾರಣಕ್ಕಾಗಿ ಇಂದು ಹರದನಹಳ್ಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇವೆ. ಉಪ ಚುನಾವಣೆ ಫಲಿತಾಂಶಕ್ಕೆ ಇನ್ನು ಐದು ದಿನಗಳು ಬಾಕಿಯಿದ್ದು, ಗೆಲ್ಲುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಚುನಾವಣೆ ವೇಳೆ ಮಾಡಿದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕಾಂಗ್ರೆಸ್‌ ನಾಯಕರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನನ್ನ ಸ್ವಾಭಾವಿಕ ಗುಣದಂತೆ ಕೆಲವೊಂದು ವಿಚಾರಗಳನ್ನು ರಾಜ್ಯದ ಜನತೆಗೆ ಬಿಟ್ಟು ಬಿಡುತ್ತೇನೆ. ಏಕೆಂದರೆ ನಮ್ಮ ತಾತನವರಾದ ಎಚ್.ಡಿ.ದೇವೇಗೌಡ ಅವರಿಗೂ ರಾಮನಗರಕ್ಕೂ 1983 ವರ್ಷಗಳ ರಾಜಕೀಯ ನಂಟಿದೆ ಎಂದರು.

Tags: