Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಕ್ಟೋಬರ್.‌24ರಿಂದ ಹಾಸನಾಂಬೆ ದರ್ಶನೋತ್ಸವ ಆರಂಭ

ಹಾಸನ: ಇತಿಹಾಸ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ದರ್ಶನೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಸ್ಥಾನದ ಬಾಗಿಲು ಅಕ್ಟೋಬರ್.‌24ರ ಮಧ್ಯಾಹ್ನ ತೆರೆಯಲಿದೆ.

ನವೆಂಬರ್.‌3ರಂದು ದರ್ಶನಕ್ಕೆ ತೆರೆ ಬೀಳಲಿದ್ದು, ಹಾಸನಾಂಬೆ ದರ್ಶನಕ್ಕೆ ಈ ಬಾರಿ ಕೇವಲ 9 ದಿನಗಳು ಮಾತ್ರ ಇರಲಿದೆ.

ಪ್ರಥಮ ಹಾಗೂ ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಏಳು ದಿನದಲ್ಲಿ ಈ ಬಾರಿ ಕನಿಷ್ಠ 20 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ದೇವಾಲಯದ ಆವರಣವನ್ನು ಈಗಾಗಲೇ ಸಿಂಗರಿಸಲಾಗುತ್ತಿದ್ದು, ರಾಜಗೋಪುರ ಮತ್ತು ದೇವಾಲಯದ ಬಾಗಿಲಿಗೆ ಬಣ್ಣ ಬಳಿಯಲಾಗುತ್ತಿದೆ.

ವಿದ್ಯುತ್‌ ದೀಪಾಲಂಕಾರ ಕೆಲಸ ಕೂಡ ಶರವೇಗದಲ್ಲಿ ಸಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿದ್ಯುತ್‌ ದೀಪಾಲಂಕಾರಕ್ಕೆ ಚಾಲನೆ ನೀಡಲಾಗಿದೆ.

 

Tags: