ಹಾಸನ: ವಾಹನಗಳಿಗೆ ನಿಷೇಧವಿದ್ದರೂ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಬೆಟ್ಟದಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಹೊಸಹಳ್ಳಿ ಬೆಟ್ಟದ ಕೆಳಗಿರುವ ಎಸಳೂರು ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಎರಡು ವಾಹನಗಳಲ್ಲಿ ಬಂದ ಪ್ರವಾಸಿಗರು ಹುಚ್ಚಾಟ ನಡೆಸಿದ್ದಾರೆ.
ಪ್ರವಾಸಿಗರು ತಮ್ಮ ವಾಹನವನ್ನು ಮನಸೋಇಚ್ಛೆ ಓಡಿಸಿ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಹಾಗೂ ಲೈಕ್ ಗಿಟ್ಟಿಸಿಕೊಳ್ಳಲು ಪರಿಸರ ಹಾಳು ಮಾಡುತ್ತಿರುವ ಪ್ರವಾಸಿಗರ ಮೇಲೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಈ ರೀತಿ ಪ್ರವಾಸಿ ತಾಣಗಳನ್ನು ಶೋಕಿಗಾಗಿ ಹಾಳು ಮಾಡುತ್ತಿರುವವವರ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.





