ಹಾಸನ: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಸ್ವಗ್ರಾಮ ಹಾಸನದ ಹೇರೂರು ಗ್ರಾಮಕ್ಕೆ ಮೃತದೇಹವನ್ನು ತರಲಾಗಿದೆ.
ಮಗಳ ಮೃತದೇಹ ನೋಡುತ್ತಿದ್ದಂತೆ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮಕ್ಕೆ ಶೋಭಿತಾ ಮೃತದೇಹ ತಲುಪಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.
ಇನ್ನು ಹೈದರಾಬಾದ್‌ನಲ್ಲಿ ಬ್ರಹ್ಮಗಂಟು ಖ್ಯಾತಿಯ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದರು.
ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಧಾರವಾಹಿಯಿಂದಲೇ ಭಾರೀ ಜನಪ್ರಿಯತೆ ಪಡೆದಿದ್ದರು.
ಮದುವೆಯಾದ ಬಳಿಕ ಹೈದರಾಬಾದ್‌ನಲ್ಲಿ ವಾಸವಾಗಿದ್ದ ಶೋಭಿತಾ, ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದರು. ಶೋಭಿತಾ ಸಾವಿನ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.