Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

ಹಾಸನ | ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು ; ಕಾರಣವೇನು ಗೊತ್ತಾ?

hasana marriage

ಹಾಸನ : ಮಹೂರ್ತದ ವೇಳೆ ಹಸೆಮಣೆಯಿಂದ ವಧು ಹೊರ ನಡೆದಿರುವಂತಹ ಘಟನೆ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ(ಮೇ.23) ನಡೆದಿದೆ.

ಹಾಸನದ ಬೂವನಹಳ್ಳಿಯ ಯುವತಿ ಪಲ್ಲವಿ ಮತ್ತು ಆಲೂರು ತಾಲೂಕಿನ ಈಶ್ವರಹಳ್ಳಿ ಕೊಡುಗೆ ಗ್ರಾಮದ ಯುವಕ, ಶಿಕ್ಷಕ ವೇಣುಗೋಪಾಲ್‌ ಮದುವೆ ಶುಕ್ರವಾರ ನಿಗದಿಯಾಗಿತ್ತು. ಅದರಂತೆ ಎಲ್ಲಾ ಕೈಂಕರ್ಯಗಳು ನೆರವೇರಿದ್ದವು. ತಾಳಿ ಕಟ್ಟುವ ಕೆಲ ಕ್ಷಣಗಳ ಮುನ್ನ ವಧುವಿಗೆ ದೂರವಾಣಿ ಕರೆಯೊಂದು ಬಂತು. ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ಹಸೆಮಣೆ ಮೇಲಿಂದ ಎದ್ದು ಕೊಠಡಿ ಸೇರಿಕೊಂಡರು.

ಪೋಷಕರು ಮನವೊಲಿಸಿದರೂ ಯುವತಿ ಮದುವೆಗೆ ಒಪ್ಪಲಿಲ್ಲ. ವರನ ಕಡೆಯವರೂ ನಮಗೂ ಈ ಮದುವೆ ಬೇಡ ಎಂದು ಹೊರಟರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಅಹಿತಕರ ಬೆಳವಣಿಗೆ ತಡೆದಿದ್ದಾರೆ.

ಯುವತಿ ಪಲ್ಲವಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಪ್ರಿಯಕರನ ಕರೆ ಬಂದ ತಕ್ಷಣ ಮದುವೆ ಬೇಡ ಎಂದು ಪಲ್ಲವಿ ಹಸೆಮಣೆ ಬಿಟ್ಟು ಮೇಲೆದ್ದರು ಎನ್ನಲಾಗಿದೆ.

Tags:
error: Content is protected !!