Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಜೆ ಡಿ ಎಸ್‌ ಪಕ್ಷದ ಮತದಾರರು ಕಟೀಲ್‌ ಹಿಡಿತದಲ್ಲಿ ಇದ್ದಾರೆಯೇ..? : ಜೆ ಡಿ ಎಸ್‌ ವಕ್ತಾರ ಆಕ್ರೋಶ

ಹಾಸನಮುಂದಿನ ವಿಧಾನಸಭೆ ಚುನಾವಣೆ ಬಳಿಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದವರು ನಿರುದ್ಯೋಗಿಗಳಾಗುತ್ತಾರೆ ಎನ್ನಲು ಮತದಾರರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜೇಬಿನಲ್ಲಿದ್ದಾರೆಯೇ ಎಂದು ಜಿಲ್ಲಾ ಜೆಡಿಎಸ್‌ ವಕ್ತಾರ ರಘು ಹೊಂಗೆರೆ ಪ್ರಶ್ನಿಸಿದ್ದಾರೆ.

 ಚುನಾವಣೆಯಲ್ಲಿ ಮತ ಹಾಕುವುದು ಜಿಲ್ಲೆಯ ಹಾಗೂ ನಾಡಿನ ಜನರು. ಅವರೆಲ್ಲಾ ಕಟೀಲ್‌ ಅವರ ಹಿಡಿತದಲ್ಲಿ ಇದ್ದಾರೆಯೇ ಎಂಬುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ” ಎಂದು ಟಾಂಗ್‌ ನೀಡಿದ್ದಾರೆ.

ರಾಷ್ಟ್ರೀಯವಾದಿ ಹೆಸರಿನಲ್ಲಿ ಬಿಜೆಪಿ ಯವರು ಮಾಡುತ್ತಿರುವ ಕೋಮುವಾದ, ದ್ವೇಷ ರಾಜಕೀಯ, ಆಪರೇಷನ್‌ ಕಮಲ ದಂತಹ ರಾಜಕಾರಣ ವನ್ನು ಜೆಡಿಎಸ್‌ ನಾಯಕರು ಎಂದೂ ಮಾಡಿಲ್ಲ. ವಿಶ್ವದಲ್ಲೇ ದೊಡ್ಡ ಪಾರ್ಟಿ ಎಂದುಕೊಳ್ಳುವ ಬಿಜೆಪಿಯವರು ಬೇರೆ ಪಕ್ಷಗಳಿಂದ ಅನೇಕರನ್ನು ಬಿಜೆಪಿಗೆ ಕರೆತರಲು ಅಡ್ಡ ರಾಜಕಾರಣ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನೀಡಿರುವ ಸ್ವಚ್ಛ ಹಾಗೂ ಪ್ರಾಮಾಣಿಕ ಆಡಳಿತದ ಬಗ್ಗೆ ನಾಡಿನ, ದೇಶದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧಿಕಾರ ನಡೆಸಿದ ಅವಧಿಯಲ್ಲಿಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದಂತೆ ಅಧಿಕಾರ ನಡೆಸಿದ್ದಾರೆ. ಅಂಥವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ