Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಹನೂರು : ಪಶು ವೈದ್ಯಾಧಿಕಾರಿಗಳಿಂದ ಚರ್ಮಗಂಟು ರೋಗದ ಹಸುಗಳಿಗೆ ಲಸಿಕೆ

ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಹಸುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದ ಹಿನ್ನೆಲೆ ಸಹಾಯಕ ನಿರ್ದೇಶಕ ಸಿದ್ದರಾಜು ನೇತತ್ವದ ತಂಡ ಭಾನುವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.

ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆ ಹೊಲ ಗ್ರಾಮದ ತಂಗವೇಲು ಎಂಬುವವರ ಹಸು ಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡು ಒಂದು ಹಸು ಮೃತಪಟ್ಟಿದ್ದು. ತದನಂತರ ಪೊನ್ನಾಚಿ ಗ್ರಾಮದ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಸ್ತುಗಳಿಗೆ ಗಂಟು ರೋಗ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಉಪನಿರ್ದೇಶಕ ಪಶುಪಾಲನಾ ಇಲಾಖೆ ಡಾ.ಶಿವಣ್ಣನವರ ಮಾರ್ಗದರ್ಶನದಲ್ಲಿ ಹನೂರು ತಾಲ್ಲೂಕಿನ ಸಹಾಯಕ ನಿರ್ದೇಶಕ ಸಿದ್ದರಾಜು ,ಪಶು ಪರೀಕ್ಷಕರು ಗಳಾದ ಬಸವಣ್ಣ,ಪಂಚಿಯಪ್ಪನ ಹಾಗೂ ಸಿಬ್ಬಂದಿ ವರ್ಗ ಪೊನ್ನಾಚಿ ಗ್ರಾಮಕ್ಕೆ ಭೇಟಿ ನೀಡಿ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಭಾನುವಾರ ಚರ್ಮ ಗಂಟುರೋಗ ಬಂದಿರುವ ಹಸುಗಳಿಗೆ ಎಲ್ಎಸ್ ಡಿ ಚುಚ್ಚುಮದ್ದು, ಹಾಗೂ ಇತರೆ ರಾಸುಗಳಿಗೆ ರೋಗ ನಿಯಂತ್ರಕ ಚುಚ್ಚುಮದ್ದುಗಳನ್ನು ನೀಡಲಾಗಿದೆ .

ನವೆಂಬರ್ 7 ರಿಂದ ಜಿಲ್ಲೆಯಾದ್ಯಂತ ರಾಸುಗಳಿಗೆ ಕಾಲು ಬಾಯಿ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಾಧಿಕಾರಿಗಳು ಗ್ರಾಮಕ್ಕೆ ಬಂದಾಗ ಹಸುಗಳಿಗೆ ಲಸಿಕೆ ಹಾಕಿಸಿ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಡಾ ಶಿವಣ್ಣ ಮನವಿ ಮಾಡಿದ್ದಾರೆ

ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಹಸುಗಳಿಗೆ ಕಾಣಿಸಿಕೊಂಡಿರುವ ಚರ್ಮ ಗಂಟು ರೋಗಕ್ಕೆ ರೈತರು ಭಯ ಬೀಳುವ ಅಗತ್ಯವಿಲ್ಲ, ಚಿಕಿತ್ಸೆ ನೀಡಿದ 4 ದಿನಗಳೊಳಗೆ ಹಸುಗಳು ಚೇತರಿಸಿಕೊಳ್ಳಲಿದೆ.ಹನೂರು ತಾಲ್ಲೂಕಿನ ನಾಗನತ್ತ,ಅರಬಗೆರೆ ಮಲೆಮಾದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಗಂಟು ರೋಗ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಿದ ನಂತರ ಸಮಸ್ಯೆ ಬಗೆಹರಿದಿದೆ. ಕಕ್ಕೆ ಹೊಲದ ತಂಗವೇಲು ಎಂಬುವರಿಗೆ ಸೇರಿದ ಹಸು ರೋಗಕ್ಕೆ ತುತ್ತಾಗಿ ಮೃತಪಟ್ಟಿರುವುದರಿಂದ ಇವರಿಗೆ ಸರ್ಕಾರದಿಂದ 20 ಸಾವಿರ ಪರಿಹಾರ ಧನ ಸಿಗಲಿದೆ ಎಂದು ಡಾ.ಶಿವಣ್ಣ ಪತ್ರಿಕೆಗೆ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ