ಹನೂರು: ತಾಲೂಕಿನ ಬಸವನಗುಡಿ ಗ್ರಾಮದ ಅನಿಲ್ ಕುಮಾರ್ ಕಾಣೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
ಬಸವನಗುಡಿ ಗ್ರಾಮದ ಅನಿಲ್ ಕುಮಾರ್ ರವರು ಅಕ್ಟೋಬರ್ 5 ರ ಬೆಳಿಗ್ಗೆ 6ಗಂಟೆ ಸಮಯದಲ್ಲಿ ಪರಿಚಯಸ್ಥರಾದ ಸರೋಜಮ್ಮಳನ್ನು ಕೊಳ್ಳೆಗಾಲಕ್ಕೆ ಹೋಗಿ ಮೈಸೂರು ಬಸ್ ಹತ್ತಿಸಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಸ್ ಬಂದಿರಲಿಲ್ಲ, ನಂತರ ಗಂಡನ ಮನೆಗೆ ಫೋನ್ ಮಾಡಿದಾಗ ಬರುತ್ತೇನೆಂದು ಹೇಳಿದರು . ಅಂದಿನಿಂದ ಇವತ್ತಿನವರೆಗೂ ಬಂದಿರುವುದಿಲ್ಲ ಅವರು ಮನೆಯಿಂದ ಹೋಗುವಾಗ ನೀಲಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಮಾತನಾಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ . ಸುಳಿವು ಸಿಕ್ಕಲ್ಲಿ ಹನೂರು ಪೊಲೀಸ್ ಠಾಣೆಯನ್ನು08224268803 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





