ಹನೂರು : ಪಟ್ಟಣದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಮೂರ್ತಿರವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪರಶಿವಯ್ಯ ರವರನ್ನು ಕೊಳ್ಳೇಗಾಲ ನಗರಸಭೆ ಸಮುದಾಯ ಸಂಘಟನಾಧಿಕಾರಿ ಯಾಗಿ ವರ್ಗ ಮಾಡಲಾಗಿದ್ದು ,ಸ್ಥಳ ನಿರೀಕ್ಷಣೆಯಲ್ಲಿದ್ದ ಮೂರ್ತಿ ರವರನ್ನು ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯನ್ನಾಗಿ ವರ್ಗಾವಣೆಗೊಳಿಸಲಾಗಿದೆ.
ಹೈಕೋರ್ಟ್ ಆದೇಶ ಮಾಡಿದ 2 ತಿಂಗಳ ನಂತರ ಕರ್ತವ್ಯಕ್ಕೆ ಅವಕಾಶ : ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರ್ತಿ ರವರಿಗೆ ಹುದ್ದೆ ತೋರಿಸದೆ 2021ರ ಡಿಸೆಂಬರ್ ನಲ್ಲಿ ವರ್ಗಾವಣೆ ಮಾಡಲಾಗಿತ್ತು ಇವರ ಜಾಗಕ್ಕೆ ಪರಶಿವಯ್ಯ ಎಂಬುವವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು .ಈ ಹಿನ್ನೆಲೆ ಮುಖ್ಯಾಧಿಕಾರಿ ಮೂರ್ತಿರವರು ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.ತಕರಾರು ಅರ್ಜಿಯನ್ನು ಮಾನ್ಯ ಮಾಡಿ 2022 ಆಗಸ್ಟ್ 18ರಂದು ಹೈಕೋರ್ಟ್ ವಿಭಾಗೀಯ ಪೀಠ ಮುಖ್ಯ ನ್ಯಾಯಾಧೀಶರಾದ ಸುನೀಲ್ ದತ್ ಯಾದವ್ ರವರು ಸರ್ಕಾರದ ಆದೇಶವನ್ನು ರದ್ದು ಮಾಡಿ ಅರ್ಜಿದಾರರನ್ನು ಮೂಲ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಲಾಗಿತ್ತು.ಹೈಕೋರ್ಟ್ ಆದೇಶದಂತೆ ಹೈಕೋರ್ಟ್ ಆದೇಶ ಪ್ರತಿ ಹಾಗೂ ಮುಖ್ಯಾಧಿಕಾರಿ ಹುದ್ದೆಗೆ ಮುಂದುವರೆಯಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದರು. ಇದಾದ 2ತಿಂಗಳುಗಳ ಬಳಿಕ ಮೂರ್ತಿ ರವರಿಗೆ ಜಿಲ್ಲಾಧಿಕಾರಿಗಳು ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಮೂರ್ತಿ ರವರನ್ನು ವರ್ಗಾಯಿಸಿದ್ದಾರೆ





