ಹನೂರು : ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಗುರುವಾರ ಸಂಜೆ ವಿದ್ಯುತ್ ಸ್ಪರ್ಶಿಸಿ 2 ಇಲಾಖೆ ಹಸು ಮೃತಪಟ್ಟಿವೆ.
ಗ್ರಾಮದ ಶಿವನಮಣಿ ಎಂಬವರು ತಮ್ಮ ತೋಟದ ಜಮೀನಿನ ಸಮೀಪದಲ್ಲಿ ಗುರುವಾರ ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಂಜೆಯಾದರೂ ಮನೆಗೆ ಬಾರದ ಹಿನ್ನಲೆ ಹೋಗಿ ನೋಡಲಾದ್ದರಿಂದ ಹಸುಗಳು ವಿದ್ಯುತ್ ಟ್ರಾನ್ಸ್‍ಫರ್ಮರ್ ಅಳವಡಿಸಿರುವ ಕಂಬದ ಸಮೀಪದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿವೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಸೆಸ್ಕ್ ನೌಕರರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ವರದಿ ನೀಡುವಂತೆ ಎಇಇ ಶಂಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

80 ಸಾವಿರ ರೂ ಬೆಲೆಬಾಳುತ್ತಿದ್ದ ಇಲಾತಿ ಹಸು ಹಾಲು ನೀಡುತ್ತಿತ್ತು. ಇದರಿಂದ ಜೀವನ ನಿರ್ವಹಣೆ ಸಾಗುತ್ತಿತ್ತು. ಮೃತಪಟ್ಟಿರುವುದರಿಂದ ತುಂಬಾ ನಷ್ಟವಾಗಿದೆ. ಆದ್ದರಿಂದ ಸರ್ಕಾರದಿಂದ ಪರಿಹಾರ ನೀಡುವಂತೆ ಶಿವನಮಣಿ ಒತ್ತಾಯಿಸಿದ್ದಾರೆ.





