ಹನೂರು : ನೆಲ ಜಲ ಮತ್ತು ಭಾಷೆಯ ಉಳಿವಿನ ವಿಚಾರ ಬಂದಾಗ ಸರ್ವರು ತಮ್ಮ ವೈಯಕ್ತಿಕ ಹಿತವನ್ನು ಬದುಗಿಟ್ಟು ಒಂದಾಗಿ ಹೋರಾಟ ನಡೆಸಬೇಕು ಎಂದು ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಮಿತಿ ಸದಸ್ಯ ಜನ ಧ್ವನಿ ಬಿ ವೆಂಕಟೇಶ್ ತಿಳಿಸಿದರು.
ತಾಲೂಕಿನ ರಾಮಪುರ ಪಟ್ಟಣದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭವ್ಯ ಪರಂಪರೆಯುಳ್ಳ ಕನ್ನಡ ನಾಡನ್ನು ಕಟ್ಟುವಲ್ಲಿ ಹಲವಾರು ಹೋರಾಟಗಾರರ ಶ್ರಮವಿದ್ದು ಇಂಥ ಪುಣ್ಯಭೂಮಿಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾನು ನುಡಿಯ ವಿಚಾರದಲ್ಲಿ ದಕ್ಕೆ ಬಂದಾಗ ನಾವು ಸಹ ಕೈ ಕೊಟ್ಟು ಕೂರಲು ಸಾಧ್ಯವಿಲ್ಲ, ಕರ್ನಾಟಕ 10 ಹಲವು ಕಲೆ ಮತ್ತು ಸಂಸ್ಕೃತಿಯ ನೆಲೆಬೀಡಾಗಿದ್ದು ಆಗಿದ್ದು ಇಂತಹ ಗಂಡು ಮೆಟ್ಟಿನ ನೆಲ ವಿಶ್ವದ ಗಮನ ಸೆಳೆದಿರುವುದು ನಮ್ಮ ಮಣ್ಣಿನ ಕೆಂಪು ಹಾಗೂ ಸೋಂಪಿಗೆ ಉತ್ತಮ ಗರಿ ಎಂದು ಹೆಮ್ಮೆಯ ನುಡಿಗಳನ್ನು ಹಾಡಿದರು.
ಕನ್ನಡ ನೆಲ,ಜಲ ವಿಷಯ ಬಂದಾಗ ಮೊದಲು ನಿಂತುಕೊಳ್ಳುವುದು ಆಟೋ ಚಾಲಕರು ಇವರ ಕನ್ನಡ ಪ್ರೇಮವನ್ನು ಪ್ರತಿಯೊಬ್ಬರು ಮೆಚ್ಚಲೇಬೇಕು. ನವೆಂಬರ್ ತಿಂಗಳಿಗೆ ಕನ್ನಡ ರಾಜ್ಯೋತ್ಸವ ಸೀಮಿತವಾಗದೆ ವರ್ಷಪೂರ್ತಿ ರಾಜ್ಯೋತ್ಸವ ಆಚರಣೆ ಮಾಡುವಂತಾಗಬೇಕು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಧ್ವನಿ ವೆಂಕಟೇಶ್ ರವರನ್ನು ವಾದ್ಯ ಮೇಳಗಳೊಂದಿಗೆ ಗ್ರಾಮಸ್ಥರು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಗೋವಿಂದ್ ರಾಜು, ಅಶ್ವಥ್, ಮಾದೇಶ್, ಮುನೇಶ್ ಸೇರಿದಂತೆ ಆಟೋ ಚಾಲಕರು ಹಾಗೂ ಮಾಲೀಕರುಗಳು, ಗ್ರಾಮಸ್ಥರು ಹಾಜರಿದ್ದರು.