Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಹನೂರು : ಬುಡಕಟ್ಟು ಸಮುದಾಯದ ನಾಯಕ ಬಿರ್ಸ ಮುಂಡ ಜಯಂತಿ ಆಚರಣೆ

ಹನೂರು: ಪಟ್ಟಣದಲ್ಲಿ ಯುವ ಮುಖಂಡ ನಿಶಾಂತ್ ಅವರು ಬುಡಕಟ್ಟು ಸಮುದಾಯದ ನಾಯಕ ಬಿರ್ಸ ಮುಂಡ ಜಯಂತಿ ಅಂಗವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾದಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದರು.

ಬಿರ್ಸಾ ಮುಂಡಾ ಜಯಂತಿ ಅಂಗವಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸೋಲಿಗೆ ಸಮುದಾಯದ ಜನರು ಪಟ್ಟಣದ ಮಹದೇಶ್ವರ ಬೆಟ್ಟ ರಸ್ತೆಯಿಂದ ಮೆರವಣಿಗೆ ಹೊರಟು ಪಟ್ಟಣದ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡರು.

ಯುವ ಮುಖಂಡ ನಿಶಾಂತ್ ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜೀರಿಗೆ ಗದ್ದೆ ದೊಡ್ಡ ಮಾದಮ್ಮ ಅವರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿದ ನಿಶಾಂತ್ ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕೃತಿಯನ್ನು ಹಲ್ಲೆಗಳೆಯುವವರ ವಿರುದ್ಧ ಸಿಡಿದೆದ್ದಿದ್ದ. ತನ್ನ ಜನ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತ್ತಿರುವುದನ್ನು ಕಂಡು ಬ್ರಿಟಿಷರ ವಿರುದ್ಧ ದಂಗೆ ಹೇಳುವುದರ ಮೂಲಕ ಆದಿವಾಸಿ ಸಮುದಾಯದ ನಾಯಕನಾಗಿ ಹೊರಹೊಮ್ಮಿದರು.

1893-94ರಲ್ಲಿ ಸರ್ಕಾರ ಕಾಡುಗಳನ್ನು ರಕ್ಷಿತಾ ಅರಣ್ಯಗಳೆಂದು ಘೋಷಿಸಿತು. ಇದರಿಂದ ಉದ್ರಿಕ್ತ ಗೊಂಡ ಬಿರ್ಸಮುಂಡ ಸಮುದಾಯದ ಜನರನ್ನು ಸಂಘಟಿಸಿ ಹೋರಾಟಕ್ಕೆ ಹೇಳಿದು ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತನ್ನ ಹೋರಾಟದ ರೂಪ ರೇಷೆಗಳನ್ನು ಬದಲಾಯಿಸಿದರು.

ದಿನದಿಂದ ದಿನಕ್ಕೆ ಬಿರ್ಸಾ ಮುಂಡನ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ಕಂಡ ಬ್ರಿಟಿಷರು ಆತನನ್ನು ಬಂಧಿಸಿ ಎರಡು ವರ್ಷಗಳ ಕಾಲ ಸೆರೆಮನೆಯಲ್ಲಿ. ಎರಡು ವರ್ಷಗಳ ಬಳಿಕ ತನು ಹೋರಾಟವನ್ನು ಆರಂಭಿಸಿದ ಬಿರ್ಸಮುಂಡ ತನ್ನ ಸಮುದಾಯದ ಮೇಲಾಗುತ್ತಿದ್ದ ದೌರ್ಜನ್ಯಗಳನ್ನು ಖಂಡಿಸಿ ಗುತ್ತಿಗೆದಾರರು ಲೇವಾದೇವಿದಾರರು ಮುಂತಾದವರ ವಿರುದ್ಧ ಉಗ್ರ ಹೋರಾಟವನ್ನು ರೂಪಿಸುವುದರ ಮೂಲಕ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದರು.

ಇದೇ ಸಂದರ್ಭದಲ್ಲಿ ಸೋಲಿಗ ಮುಖಂಡರಾದ ರಂಗೇಗೌಡ ,ಸೀಗೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬುಲೆಟ್ ಬಸವರಾಜು,ಬೈಲೂರು ಗ್ರಾಪಂ ಉಪಾಧ್ಯಕ್ಷ ಸದಾನಂದ ಮೂರ್ತಿ ಮುಖಂಡರುಗಳಾದ ರವೀಂದ್ರ, ಕಣ್ಣಪ್ಪ, ಪಾಳ್ಯ ಸಿದ್ದಪ್ಪಾಜಿ ಕಿರಣ್, ಬಾಬು,ಚೇತನ್, ತೇಜು, ಪ್ರೀತಮ್, ಗೌತಮ್ ಸೇರಿದಂತೆ ಆದಿವಾಸಿ ಸಮುದಾಯದ ಮುಖಂಡರುಗಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ