ಹನೂರು : ಮೂರು ದಿನದೊಳಗೆ ಮಳಿಗೆದಾರರು ಬಾಡಿಗೆ ಕರಾರು, ಬಾಡಿಗೆ ಪಾವತಿ ಮಾಡದಿದ್ದರೆ ಕಾನೂನಿನಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಮೂರ್ತಿ ಎಚ್ಚರಿಕೆ ನೀಡಿದರು.
ಕಳೆದ ಹಲವು ತಿಂಗಳಿನಿಂದ ಲಕ್ಷಾಂತರ ಬಾಡಿಗೆ ಉಳಿಸಿಕೊಂಡಿದ್ದ ಮಳಿಗೆದಾರರಿಗೆ ಹಲವು ಬಾರಿ ನೋಟಿಸ್ ನೀಡಿದ್ದರು ಸಹ ಕ್ಯಾರೆ ಎಂದಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆಯೂ ಸಹ ಬಾಡಿಗೆ ಪಾವತಿ ಮಾಡುವಂತೆ ನೋಟಿಸ್ ನೀಡಿ ಸಭೆ ಕರೆಯಲಾಗಿತ್ತು. ಸಭೆಗೂ ಯಾರೊಬ್ಬರೂ ಹೋಗದಿದ್ದರಿಂದ ಮುಖ್ಯಾಧಿಕಾರಿ ಮೂರ್ತಿ ಹಾಗೂ ಸಿಬ್ಬಂದಿಗಳು ಬಾಡಿಗೆ ಕರಾರು ಹಾಗೂ ಬಾಡಿಗೆ ಪಾವತಿ ಮಾಡದೇ ಇದ್ದ 5 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿಗೆ ಬೀಗ ಹಾಕಲಾಯಿತು. ತದನಂತರ ಮುಖ್ಯಾಧಿಕಾರಿಗಳು ಹಾಗೂ ಉಳಿದ ಮಳಿಗೆದಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಪಪಂ ಅಧ್ಯಕ್ಷ ಚಂದ್ರಮ್ಮ ಮಧ್ಯಪ್ರವೇಶಿಸಿ ಈ ವಾರದೊಳಗೆ ಬಾಡಿಗೆ ಪಾವತಿ ಮಾಡಿ,ಕರಾರು ಮಾಡಿಸಿಕೊಳ್ಳದೆ ಇರುವ ಮಳಿಗೆದಾರರು ನಾಳೆ ಮಾಡಿಸಿಕೊಂಡು ಪಟ್ಟಣ ಪಂಚಾಯಿತಿಗೆ ಉಳಿಕೆ ಹಣ ಜಮಾ ಮಾಡುವಂತೆ ತಿಳಿಸಿದ ಹಿನ್ನೆಲೆ ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು.
ತಳ್ಳುಗಾಡಿ ತೆರವುಗೊಳಿಸಿ : ಪಟ್ಟಣದಾಗ ಖಾಸಗಿ ಬಸ್ ನಿಲ್ದಾಣದಲ್ಲಿ ಹತ್ತಕ್ಕೂ ಹೆಚ್ಚು ತಳ್ಳುಗಾಡಿ ವ್ಯಾಪಾರಸ್ಥರು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನಮಗೂ ಸರಿಯಾದ ವ್ಯಾಪಾರವಾಗುತ್ತಿಲ್ಲ ಅಲ್ಲದೆ ಬಸ್ ನಿಲುಗಡೆಗೂ ತೊಂದರೆ ಆಗುತ್ತದೆ ಇದನ್ನು ಸರಿಪಡಿಸುವಂತೆ ಹತ್ತಾರು ಬಾರಿ ತಿಳಿಸಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹನೂರು ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು





