ಮೈಸೂರಿನಲ್ಲಿ ಇಂದು ( ಡಿಸೆಂಬರ್ 30 ) ಹನುಮೋತ್ಸವ ನಡೆದಿದೆ. ಹನುಮೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹನುಮ ಜಯಂತಿ ಅದ್ದೂರಿಯಾಗಿ ನಡೆಯಿತು. ಅರಮನೆ ಸಮೀಪದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಿದ ಬಳಿಕ 8 ಹನುಮ ಮೂರ್ತಿಗಳ ಮೆರವಣಿಗೆಯನ್ನು ಮಾಡಲಾಯಿತು.
ಈ ಸಮಾರಂಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗವಹಿಸಿದ್ದರು. ಶಾಸಕರಾದ ಜಿಟಿ ದೇವೇಗೌಡ, ಟಿ ಎಸ್ ಶ್ರೀವತ್ಸ, ಕೆ ಹರೀಶ್ ಗೌಡ, ಮಾಜಿ ಮಹಾಪೌರ ಶಿವಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಟಿಡಿ ಪ್ರಕಾಶ್, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಎಂ ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಉತ್ಸವದಲ್ಲಿ ಸಾವಿರಾರು ಹನುಮ ಭಕ್ತರು ಭಾಗವಹಿಸಿ, ಕೇಸರಿ ಶಾಲು ಧರಿಸಿ, ಕೇಸರಿ ಬಾವುಟ ಹಾರಿಸುತ್ತಾ ರಾಮ ಹಾಗೂ ಹನುಮನಿಗೆ ಜೈಕಾರ ಕೂಗಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಹನುಮ ಮೂರ್ತಿಗೆ ತಿಂಡಿ ತಿನಿಸುಗಳ ಹಾರ ಹಾಕಿದ್ದು ವಿಶೇಷವಾಗಿತ್ತು. ಅಲ್ಲದೇ ಅಯೋಧ್ಯೆಯ ರಾಮಮಂದಿರದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.
ಮೈಸೂರು ಹನುಮೋತ್ಸವ ವಿಡಿಯೊ ವೀಕ್ಷಿಸಲು ಈ ಲಿಂಕ್ ಮೇಲ್ ಕ್ಲಿಕ್ ಮಾಡಿ: https://youtu.be/i8srMreMNXs?si=ARqT_4bKvov5rVuD





