Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹನೂರು : ಹೆಚ್‌ಡಿಕೆ ಸಮ್ಮುಖದಲ್ಲಿ ಕೈ ತೊರೆದು ತೆನೆ ಹೊತ್ತ ಹಲವರು

ಹನೂರು: ಚಾಮುಲ್ ಮಾಜಿ ಅಧ್ಯಕ್ಷ ಚಿಂಚಳ್ಳಿ ಗುರುಮಲ್ಲಪ್ಪ ಭಾನುವಾರ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಆರ್ ಮಂಜುನಾಥ್ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ನಡೆದ ಚಾಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುರುಮಲ್ಲಪ್ಪ ಪರಾಭವಗೊಂಡಿದ್ದರು. ನನ್ನ ಸೋಲಿಗೆ ಶಾಸಕ ಆರ್ ನರೇಂದ್ರ ನೇರ ಕಾರಣ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದರು. ಇದಾದ ನಂತರ ತಟಸ್ಥರಾಗಿದ್ದ ಹಿರಿಯ ಮುಖಂಡ ಗುರುಮಲ್ಲಪ್ಪ ರವರನ್ನು ಬಿಜೆಪಿಗೆ ಸೇರ್ಪಡೆಯಾಗುವಂತೆ ಜನಧ್ವನಿ ಬಿ ವೆಂಕಟೇಶ್ ಅವರು ಆಹ್ವಾನ ನೀಡಿದ್ದರು.

ಇದಾದ ಬಳಿಕ ಜೆಡಿಎಸ್ ಮುಖಂಡ ಎಂ ಆರ್ ಮಂಜುನಾಥ್ ಶುಕ್ರವಾರ ಚಿಂಚಳ್ಳಿ ಗುರುಮಲ್ಲಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಒಂದು ಸುತ್ತಿನ ಮಾತುಕತೆ ನಡೆಸಿ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರ ಬಿಡದಿ ನಿವಾಸದಲ್ಲಿ ಗುರುಮಲ್ಲಪ್ಪ ಹಾಗೂ ಇವರ ಬೆಂಬಲಿಗರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

5 ವರ್ಷ ಮೈಮುಲ್ ಅಧ್ಯಕ್ಷ ರಾಗಿ,2.5 ವರ್ಷ ಚಾಮುಲ್ ಅಧ್ಯಕ್ಷರಾಗಿ, 5 ವರ್ಷ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ 4 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರ ಅನುಭವಿಸಿದ್ದಾರೆ. ಇದಲ್ಲದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 2 ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ಸುಮಾರು 27 ವರ್ಷಗಳ ಕಾಲ ಅಧಿಕಾರ ಅನುಭವಿಸಿರುವ ಇವರು ಚಾಮುಲ್ ಚುನಾವಣೆಯ ಸೋಲಿಗೆ ಶಾಸಕ ಆರ್ ನರೇಂದ್ರರವರನ್ನು ಹೊಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ