ಸೋಮಣ್ಣ ಮೇಲೆ ಸುಮೋಟೋ ಕೇಸ್ ದಾಖಲಿಸಲು ಆಗ್ರಹ
ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಗ್ರಾ.ಪಂ.ನಿಂದ ನಿವೇಶನ ಹಂಚಿಕೆಯ ಕಾರ್ಯಕ್ರಮದಲ್ಲಿ ನೋವು ತೋಡಿಕೊಳ್ಳಲು ತೆರಳಿದ ಮಹಿಳೆ ಮೇಲೆ ಉಸ್ತುವಾರಿ ಸಚಿವ ಸೋಮಣ್ಣ ನವರು ಕಪಾಳಕ್ಕೆ ಹೊಡೆದಿರುವುದು ಖಂಡನೀಯ ಎಂದು ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಪಮ್ಮ ಅವರ ಮನೆಗೆ ಇಂದು ಭೇಟಿ ನೀಡಿದ ದಸಂಸ ಮುಖಂಡರು ಮಾತನಾಡಿ, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಹಾಗೂ ಜಿ.ಪಂ ಸಿಇಒ ಅವರ ಸಮ್ಮುಖದಲ್ಲಿಯೇ ಮಹಿಳೆಯ ಕಪಾಳಕ್ಕೆ ಹೊಡೆದಿರುವುದರಿಂದ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆಗೊಳಗಾದ ಮಹಿಳೆುಂನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನಡೆದಿರುವ ಸತ್ಯವನ್ನು ಹೊರತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ದಲಿತ ಸಂಘರ್ಷ ಸಮಿತಿ ಸಂಚಾಲಕ ನಂಜುಂಡಸ್ವಾಮಿ, ಮಾನವ ಬಂಧುತ್ವ ವೇದಿಕೆಯ ಮಾಡ್ರಹಳ್ಳಿ ಸುಭಾಷ್, ತಾಲ್ಲೂಕು ಸಂಚಾಲಕ ಸೋಮಣ್ಣ, ಸುರೇಶ್ ಜನಶಕ್ತಿ ವೇದಿಕೆ , ಮಲ್ಲೇಶ್, ರಾಜು, ರವಿ ಮತ್ತಿತರರು ಹಾಜರಿದ್ದರು.



