Mysore
19
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಗೂಳಿಪುರದಲ್ಲಿ ಉರ್ಕಾತೇಶ್ವರಿ ವಿಗ್ರಹ ಪ್ರತಿಷ್ಠಾಪನೆ

ಯಳಂದೂರು: ಸಮೀಪದ ಗೂಳಿಪುರದಲ್ಲಿ ಉರ್ಕಾತೇಶ್ವರಿ ವಿಗ್ರಹ ಪ್ರತಿಷ್ಠಾಪನೆ ಸಮಾರಂಭವು ಸಂಭ್ರಮದಿಂದ ನಡೆಯಿತು.
ಗ್ರಾಮದ ಹೊರ ವಲಯದಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದಿಂದ ಉರ್ಕಾತೇಶ್ವರಿ ವಿಗ್ರಹವನ್ನು ಪೂಜೆ ಕೈಂಕಾರ್ಯಗಳನ್ನು ಹಾಗೂ ಸತ್ತಿಗೆ, ಸೂರಪಾನಿಗಳ ಮೂಲಕ ಗುರುವಾರ ಸಂಜೆ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.
ಶುಕ್ರವಾರ ಬೆಳಗ್ಗೆ ಗ್ರಾಮದ ಮಂಟೇಸ್ವಾಮಿ ದೇಗುಲದಿಂದ ಉರ್ಕಾತಮ್ಮ ದೇವಸ್ಥಾನವರೆಗೆ ಹಾಲರುವೆ ಉತ್ಸವ ನಡೆಯಿತು. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಯಿತು. ನಂತರ ರಾಮಮಂದಿರದಲ್ಲಿ ಜನರಿಗೆ ಪ್ರಸಾದ ವಿನಿಯೋಗಗ ಮಾಡಲಾಯಿತು. ಚಾಮರಾಜನಗರ  ಗ್ರಾಮಸ್ಥರಾದ ರವೀಶ್, ದೇವರಗುಡ್ಡಪ್ಪ ಜಯಣ್ಣರವರು ಮಾತನಾಡಿದರು. ಗ್ರಾಮಸ್ಥರಾದ ಮಹಾದೇವನಾಯಕ, ದೊರೆಸ್ವಾಮಿನಾುಂಕ, ರವೀಶ್, ಜುಂಶೇಖರ್, ರಾಮು, ಅರ್ಚಕ ನಂಜುಂಡನಾುಂಕ, ಪುಟ್ಟಸ್ವಾಮಿ, ಮಹೇಶ್, ಮಹದೇವಸ್ವಾಮಿ, ನಾಗನಾಯಕ, ಗೋವಿಂದನಾಯಕ, ರಾಚಯ್ಯ, ಬಿಳಿಗಿರಿರಂಗನಾಯಕ, ರಂಗಸ್ವಾಮಿ, ಮದಕರಿ ಹಾಗೂ ವಾಲ್ಮೀಕಿ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!