Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಜನಧ್ವನಿ ಬಿ.ವೆಂಕಟೇಶ್ ನೇತೃತ್ವದಲ್ಲಿ ಗ್ರಾಪಂ ಸದಸ್ಯರು ಬಿಜೆಪಿಗೆ ಸೇರ್ಪಡೆ

ಹನೂರು : ನಮ್ಮ ಸಂಘಟನೆಯನ್ನು ಮೆಚ್ಚಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಬಿಜೆಪಿ ಸೇರ್ಪಡೆಯಾಗಿರುವುದು ಸಂತಸದ ವಿಚಾರ ಎಂದು ಒಬಿಸಿ ಕಾರ್ಯಕಾರಿಣಿ ಸದಸ್ಯ ಜನ ಧ್ವನಿ ಬಿ ವೆಂಕಟೇಶ್ ತಿಳಿಸಿದರು.

ಜನದ್ವನಿ ಬಿ ವೆಂಕಟೇಶ್ ರವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಒಂದು ವಾರದ ಅವಧಿಯಲ್ಲಿ ಪಿ ಜಿ ಪಾಳ್ಯ, ದೊಡ್ಡಾಲತ್ತೂರು, ಧನಗೆರೆ, ಸತ್ತೇಗಾಲ ಗ್ರಾಮಗಳ ಜೆಡಿಎಸ್, ಕಾಂಗ್ರೆಸ್, ಸ್ವತಂತ್ರ ಸದಸ್ಯರುಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ರವರ ಆಡಳಿತವನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ 34 ಗ್ರಾಮ ಪಂಚಾಯಿತಿ ಸದಸ್ಯರುಗಳು ಬಿಜೆಪಿ ಸೇರ್ಪಡೆಯಾಗಿ ನಮ್ಮ ಕೈ ಬಲಪಡಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಕಾರ್ಯಕರ್ತರುಗಳು ಸೇರ್ಪಡೆಯಾಗುತ್ತಿದ್ದಾರೆ. ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿರುವ ಕಾರ್ಯಕರ್ತರ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ತಿಳಿಸಿದ್ದೇನೆ. ಆದರೆ ಕೆಲವರು ಇದನ್ನು ತಿರುಚಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ನಾನು ಈಗಲೂ ನನ್ನ ಮಾತಿಗೆ ಬಂದ ದೇಶದ ಜನರಿಗೆ ಬಿಜೆಪಿ ಪಕ್ಷ ಖಂಡಿತ ಅನಿವಾರ್ಯವಾಗಿದೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಖಂಡಿತ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ಜಾದಳ ಸದಸ್ಯರುಗಳಾದ ಮಂಟೇ, ಪುಷ್ಪ, ಪನ್ನಾಡಿ, ಸಿದ್ದಪ್ಪಾಜಿ ಪಾರ್ಥಿವನ್,ಲತಾ ರಾಮೇಗೌಡ, ನೂರ್ ಸ್ವಾಮಿ,ನಾಗೇಂದ್ರ, ಸುಮರಾಜ್, ಶೇಖರ್, ನಾಗರಾಜು ಕೆಂಪರಾಜು, ಕಾಂಗ್ರೆಸ್ ಸದಸ್ಯರುಗಳಾದ ಮಹೇಶ್, ಬೈರಾ, ಶಿವು, ಮಾಜಿ ಸದಸ್ಯ ನಂಜುಂಡ ಮೂರ್ತಿ,ಬಿಜೆಪಿ ಸೇರ್ಪಡೆಯಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!