Mysore
17
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಗೋಣಿಕೊಪ್ಪ ದಸರಾ ಜನೋತ್ಸವ : ಕಣ್ಮನ ಸೆಳೆದ ಸ್ತಬ್ಧಚಿತ್ರ, ಜಾನಪದ ಕಲಾತಂಡ

ಗೋಣಿಕೊಪ್ಪ : ಸಂಸ್ಕೃತಿ ,ನಾಡು -ನುಡಿ, ಆರೋಗ್ಯ, ಪರಿಸರದ ಕಾಳಜಿಯೊಂದಿಗೆ ೪೪ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸ್ತಬ್ಧಚಿತ್ರಗಳು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಣ್ಮನ ಸೆಳೆಯಿತು.

ನಾಡ ಹಬ್ಬ ದಸರಾ ಸಮಿತಿ ಆಯೋಜಿಸಿದ ಸ್ತಬ್ಧ ಚಿತ್ರ ಮೆರವಣಿಯಲ್ಲಿ ಸಾಮಾಜಿಕ ಕಳಕಳಿ ಪರಿಸರ ಪ್ರೇಮ ಆರೋಗ್ಯ ಶಿಕ್ಷಣ ದೇಶಭಕ್ತಿ ಬಿಂಬಿಸುವ ಜವಾಬ್ದಾರಿಗಳನ್ನು ಸಂಘಟನೆಗಳು ಹೊತ್ತಿದ್ದವು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಶಾಸಕ ಕೆ ಜಿ ಬೋಪಯ್ಯ ,ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ ಮಹೇಶ್ ಜೋಶಿ ಡೋಲು ಬಾರಿಸುವ ಮೂಲಕ ಸ್ತಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಸರ್ಕಾರಿ ಇಲಾಖೆಯ ಹಾಗೂ ವಿವಿಧ ಸಂಘ-ಸಂಸ್ಥೆಗಳು ನಿರ್ಮಿಸಿದ ಸ್ತಬ್ದಚಿತ್ರಗಳ ಮೆರವಣಿಗೆ ಹೊರಟಿತು.

ಸರ್ವಂ ದಸರಾ ಸಮಿತಿ ನಿರ್ಮಿಸಿದ ಕಾಡಿನಿಂದ ನಾಡಿನಡೆಗೆ ನಾಡಿನಿಂದ ರಾಷ್ಟ್ರಪತಿ ಭವನದವರೆಗೆ ಎಂಬ ಬುಡಕಟ್ಟು ಸಮುದಾಯದ ಸಾಧಕಿ ರಾಷ್ಟ್ರಪತಿ ದ್ರೌಪದಿ ಮರ್ಮೋ ಅವರ ಸಾಧನೆಯನ್ನ ಬಿಂಬಿಸಿರುವುದು ಗಮನರ್ಹ ವಿಚಾರವಾಗಿತ್ತು.

ತಿತಿಮತಿ ರಾಮ ಮಂದಿರ ಸಮಿತಿ ನಿರ್ಮಿಸಿದ ವೀರ ಸಾವರ್ಕರ ಅವರ ಅಂಡಮಾನ್ ಕಾರಾಗೃಹ ಶಿಕ್ಷೆಯನ್ನು ತೋರಿಸುವ ಚಿತ್ರ ಸಾರ್ವಜನಿಕರಿಗೆ ಇತಿಹಾಸದ ಸಂದೇಶವಾಗಿತ್ತು.

ಅರುವತೊಕ್ಲು ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾರದಾಂಭ ದಸರಾ ಸಮಿತಿ ನಮ್ಮ ಮಕ್ಕಳು ನಮ್ಮ ಆಸ್ತಿ ಎಂಬ ತಲೆಬರಹದಡಿ ಮಾದಕ ವ್ಯಸನದಿಂದ ಮಕ್ಕಳನ್ನ ಹೊರಗೆ ತನ್ನಿ ಮಕ್ಕಳನ್ನು ದೇಶದ ಆಸ್ತಿಯಾಗಿ ಮಾಡಿ ಎಂಬ ಸಂದೇಶ ಗಮನಹರವಾಗಿತ್ತು.

ಪೊನ್ನಂಪೇಟೆ ಜಿಬಿ ಪುರುಷರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರದಲ್ಲಿ ಕಾಡು ಬೆಳಸಿ ಉಸಿರುಗಳಿಸಿ ಮರ ಕಡಿಯದಿರಿ ನಾಡು ತೊರೆಯಿದಿರಿ ಎಂಬ ಸಂದೇಶ ಇತ್ತು.

ಗೋಣಿಕೊಪ್ಪ ಭಗತ್ ಸಿಂಗ್ ಯುವಕ ಸಂಘದ ವಿಶ್ವವನ್ನೇ ನುಂಗಿದ ಮಾನವ ಕೃತಕ ಬಾಂಬ್ ಕೊರೋನಾ ಮತ್ತು ದೇವತೆಗಳು ಸಮುದ್ರಮಂತನ ಮಾಡುತ್ತಿರುವ ಬಗ್ಗೆ ಕಟ್ಟಿಕೊಟ್ಟ ಚಿತ್ರಣ ಜನರ ನೇರ ದೃಷ್ಟಿ ನೆಟಿತು.

ಕೈಕೇರಿ ಪರಿಸರ ಪ್ರೇಮಿ ಸಂಘದ ಸ್ವಚ್ಛ ಭಾರತ್ ಅಭಿಯಾನದ ಮೂಲಕ ಆರೋಗ್ಯ ಕಾಳಜಿಯನ್ನು ತೋರಿಸಿದರು.

ಅರ್ವತೋಕ್ಲು ಕಡ್ಲಯ್ಯಪ್ಪ ದಸರಾ ಸಮಿತಿ ರಚನೆಯ ಮೂಕ ಸಂದೇಶದಲ್ಲಿ ಹಾಲು ಮತ್ತು ಆಲ್ಕೋಹಾಲಿನ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸಂದೇಶ ಸಾರಿತು.

ದೇವರಪುರ ಭಗತ್ ಸಿಂಗ್ ಯುವಕ ಸಂಘದ ರಾಮ ಮಂದಿರ ನಿರ್ಮಾಣದ ಚಿತ್ರಣವನ್ನು ಕಟ್ಟಿಕೊಟ್ಟು ಹಿಂದುತ್ವದ ಪ್ರತೀಕವಾಗಿತ್ತು.

ಕೈಕೇರಿ ಹಿಂದುಸ್ತಾನ್ ಸಂಸ್ಥೆಯ ರೈತ ಮತ್ತು ಯೋಧ ಒಂದೇ ಮುಖದ ನಾಣ್ಯ ಹಾಗೂ ದೇಶದ ಮಾನ್ಯ ಸಂದೇಶದ ಚಿತ್ರ ಜನರ ಮನಸ್ಸಿನಾಳಕ್ಕೆ ಇಳಿಯಿತು.

ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಿಸಿದ ಚಿತ್ರ ಭೇಷ್ ಎನಿಸಿಕೊಂಡರೆ ಶಿಕ್ಷಣ ಇಲಾಖೆಯ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ದೇಶದ ಆಸ್ತಿಯನ್ನಾಗಿ ನೋಡಿ ಎಂಬ ಸಂದೇಶ ಸಾರಿತು.

ಆರೋಗ್ಯ ಇಲಾಖೆಯ ಯೋಜನೆಳಗಳ ಬಗ್ಗೆ ಗಮನಹರ ಸಂದೇಶವನ್ನು ಕೇಂದ್ರೀಕರಿಸಿತು.

ತಾಲೂಕು ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಒಳಗೊಂಡ ಚಿತ್ರಣವನ್ನು ಸರೋಜನಿಕರಿಗೆ ಪ್ರದರ್ಶನ ಮಾಡಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!