Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಚಾ.ನಗರಕ್ಕೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನೀಡಿ: ವಾಟಾಳ್

ಚಾಮರಾಜನಗರ: ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಹಿಂದುಳಿದ ಈ ಜಿಲ್ಲೆಗೆ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ನಗರದ ವಿವಿಧೆಡೆ ಸಂಚಾರ ಮಾಡಿ ಪ್ರತ್ಯೇಕವಾಗಿ ಸಮುದಾಯಗಳ ಮುಖಂಡರ ಭೇಟಿ ನಡೆಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಲಿಸಲಿರುವ ಆಯವ್ಯಯದಲ್ಲಿ ಚಾಮರಾಜನಗರಕ್ಕೆ ಒಂದು ಹೊಸ ಯೋಜನೆ ಪ್ರಕಟಿಸಬೇಕು. ಕಾವೇರಿ 2ನೇ ಹಂತ ಕುಡಿಯುವ ನೀರಿನ ಯೋಜನೆಗೆ ಅನುದಾನ ನೀಡಬೇಕು ಎಂದು ಹೇಳಿದರು.
ಮೊದಲಿಗೆ ಉಪ್ಪಾರ ಬೀದಿಯಲ್ಲಿರುವ ಮಂಟೇಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಉಪ್ಪಾರ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ನಗರಸಭಾ ಮಾಜಿ ಅಧ್ಯಕ್ಷ ಶಿವನಂಜಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಚಾ.ರಂ.ಶ್ರೀನಿವಾಸಗೌಡ, ಸಾಗರ್‌ರಾವತ್, ಸಂಜಯ್‌, ಕುಮಾರ್, ಮಹೇಶ್, ತಾಂಡವಮೂರ್ತಿ, ವರದನಾಯಕ, ರಾಜುನಾಯಕ, ಮಹೇಶಗೌಡ, ಪಣ್ಯದಹುಂಡಿ ರಾಜು, ಅರುಣ್‌ಕುಮಾರ್‌ಗೌಡ, ಶಿವಲಿಂಗಮೂರ್ತಿ, ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!