Mysore
27
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮಾನಸಗಂಗೋತ್ರಿಯಲ್ಲಿ ಜನಮನ ಗೆದ್ದ ಜಾರ್ಜಿಯ ತಂಡ!

ಮೈಸೂರು : ನಮ್ಮ ಕಲೆ ಸಂಸ್ಕೃತಿ ಯನ್ನು ಜಗತ್ತಿನಾದ್ಯಂತ ಸಾರುತ್ತಿರುವ ಜಾರ್ಜಿಯ ಎಂಬ ಎನ್ ಜಿ ಒ ತಂಡದವರು ಇಂದು ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಮೈಸೂರು ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ ಎರಡು ತಂಡಗಳಾಗಿ ಪ್ರದರ್ಶನ ನೀಡಿದವು.

 

ಮಿನಿ ಫಾಕ್ಸ್, ವತ್ಸಲ್ ಪರಾಶನ್, ಗಯೂಕಿ, ತೆದೋ, ಭಾರತದ ರಾಗಗಳು ಹಾಗೂ ಭಾರತೀಯ ಸಂಗೀತ ಉಪಕರಣಗಳನ್ನು ಬಳಸಿಕೊಂಡು ಸಂಗೀತ ಪ್ರದರ್ಶನ ನೀಡಿದ ಇವರು ತಮ್ಮ ಮೇಲುವಾದ ಕಂಠದಿಂದ ನೆರದಿದ್ದಂತಹ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ತಂಡದ ನಾಯಕ ಮಾತನಾಡಿ, ಭಾರತದಲ್ಲಿ ನಾವು ಪ್ರದರ್ಶನ ನೀಡುತ್ತಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ ಇಲ್ಲಿ ನಮ್ಮ ಸಂಸ್ಕೃತಿಯನ್ನು ನಿಮ್ಮೆಲ್ಲರಿಗೂ ತಿಳಿಯುವಂತೆ ಮಾಡುವುದು ನಮಗೆ ಸಂತಸ ತಂದಿದೆ ಎಂದರು.

11 ಜನರಿಂದ ಕೂಡಿದ ನ್ಯೂ ಬಾನ ತಂಡದವರು ಮೊದಲಿಗೆ ಭಾರತದ ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ಸಾರ್ವಜನಿಕರನ್ನು ಎದ್ದು ನಿಲ್ಲುವಂತೆ ಮಾಡಿದರು.

ನಂತರದಲ್ಲಿ ತಮ್ಮ ದೇಶದ ರಾಷ್ಟ್ರ ಗೀತೆಯನ್ನು ಮೈಸೂರು ಜನತೆಗೆ ಪರಿಚಯಿಸಿದರು. ಅದಾದ ನಂತರದಲ್ಲಿ ಮೂರು ಸಂಗೀತ ಪ್ರದರ್ಶನ ನೀಡಿ ಜನರ ಮನ ಸೆಳೆಯುವುದರ ಮೂಲಕ ಶಿಳ್ಳೆಯನ್ನು ತಮ್ಮದಾಗಿಸಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!