ಚಾಮರಾಜನಗರ: ನಗರದ ರಥದ ಬೀದಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ನಾಣ್ಯಗಳ ಮೇಳವನ್ನು ನ.೧೪ ರಿಂದ ೧೯ ರವರೆಗೆ ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩.೩೦ ಗಂಟೆ ತನಕ ಹಮ್ಮಿಕೊಳ್ಳಲಾಗಿದೆ ಎಂದು ಶಾಖಾ ವ್ಯವಸ್ಥಾಪಕ ಸಕ್ಸೇನಾ ತಿಳಿಸಿದ್ದಾರೆ.
೫,೧೦ ಮತ್ತು ೨೦ ರೂ. ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಮೊತ್ತಕ್ಕೆ ಬದಲಾಯಿಸಬಹುದು. ೧೦ ಮತ್ತು ೨೦ರ ನಾಣ್ಯಗಳೊಂದಿಗೆ (೧ ಬ್ಯಾಗ್) ವಿನಿಮಯ ಮಾಡಿಕೊಳ್ಳಬಹುದು. ಇಲ್ಲವೇ ಉಡುಗೊರೆಯನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





