Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ನಾಳೆಯಿಂದ 2 ದಿನ ‘ಬನ್ನಿ ನೂಲುವ’ ಕಾರ್ಯಾಗಾರ

ಮೈಸೂರು: ಪ್ರಕೃತಿ ಆಹಾರ ಬಳಗವು ಇನ್ನು ಮುಂದೆ ಪ್ರತಿ ವಾರಾಂತ್ಯದಲ್ಲಿ ಖಾದಿ ನೂಲನ್ನು ತೆಗೆಯುವ ಕಾರ್ಯಾಗಾರವನ್ನು ಪ್ರಾರಂಭಿಸುತ್ತಿದ್ದು, ನ.೫, ೬ರಂದು ‘ಬನ್ನಿ ನೂಲುವ!’ ಎಂಬ ವಾರಾಂತ್ಯದ ಚರಕ ಕಾರ್ಯಾಗಾರವನ್ನು ಆಯೋಜಿಸಿದೆ.

ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಪ್ರಕೃತಿ ಫುಡ್‌ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ೧೪೦೦ ರೂ. ಪ್ರವೇಶ ಶುಲ್ಕವಿದ್ದು, ಮೊದಲ ೧೫ ಜನರಿಗೆ ಮಾತ್ರ ಪ್ರವೇಶ ಇರಲಿದೆ. ಖಾದಿ ನೂಲನ್ನು ತೆಗೆಯುವುದು ಒಂದು ಕಲೆಯಾಗಿದೆ. ಪೆಟ್ಟಿಗೆ ಚರಕವನ್ನು ಬಳಸಿ ನೂಲುವುದನ್ನು ಕಲಿಸಿಕೊಡಲಾಗುವುದು. ಒಟ್ಟು ೮ ಗಂಟೆಗಳ ಕಾಲ (೨ ದಿನ ತಲಾ ೪ ಗಂಟೆಯ ಹಾಗೆ) ತರಬೇತಿ ನೀಡಲಾಗುವುದು. ಕೆ.ಜೆ.ಸಚ್ಚು, ಮತ್ತು ಅಭಿಲಾಷ್ ತರಬೇತಿ ನೀಡುವರು. ೧೦ ವರ್ಷ ಮೇಲ್ಪಟ್ಟವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಎರಡು ದಿನವು ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಾಗಾರದಲ್ಲಿ ಸುಸ್ಥಿರ ಬದಿಕಿನ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ಇರುತ್ತದೆ. ನೋಂದಣಿಗೆ ಮೊ.ಸಂ.೯೦೦೮೪೮೪೮೮೦ ಸಂಪರ್ಕಿಸಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ