Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಇಂದಿನಿಂದ ರಾಜೇಂದ್ರ ಶ್ರೀ ಸ್ಮರಣೆಯ 27ನೇ ಸಂಗೀತ ಸಮ್ಮೇಳನ

ಮೈಸೂರು: ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣೆಯ ೨೭ನೇ ಸಂಗೀತ ಸಮ್ಮೇಳನ ವಿದ್ವಾನ್ ವಿ.ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಡಿ.೨ರಿಂದ ೬ರವರೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ಡಿ.೨ರಂದು ಸಂಜೆ ೫.೩೦ಕ್ಕೆ ಸಂಗೀತ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಬಳಿಕ ಮೈಸೂರು ಎ.ಚಂದನ್ ಕುಮಾರ್ ಕೊಳಲು ವಾದನ ನೀಡಲಿದ್ದಾರೆ.
೩ರಂದು ಬೆಳಿಗ್ಗೆ ೧೦ಕ್ಕೆ ವಿದ್ವಾನ್ ತುಮಕೂರು ಬಿ.ರವಿಶಂಕರ್ ನಿರ್ದೇಶನದಲ್ಲಿ ನಾದ ಲಹರಿ ಕಾರ್ಯಕ್ರಮ ನಡೆಯಲಿದೆ. ವಿದ್ವತ್ ಗೋಷ್ಠಿಯಲ್ಲಿ ಡಾ.ರಮಾ ವಿ.ಬೆಣ್ಣೂರ್, ಡಾ.ಸುಕನ್ಯಾ ಪ್ರಭಾಕರ್, ವಿದ್ವಾನ್ ಎಸ್.ಸುದರ್ಶನ್ ಭಾಗವಹಿಸಲಿದ್ದಾರೆ. ಸಂಜೆ ೫.೩೦ಕ್ಕೆ ಕೇಶವ್ ಮೋಹನ್ ಕುಮಾರ್ ಅವರಿಂದ ವಯೋಲಿನ್ ವಾದನ, ಸಂಜೆ ೬.೩೦ಕ್ಕೆ ಮಲ್ಲಾಡಿ ಸಹೋದರರಿಂದ ದ್ವಂದ್ವ ಗಾಯನ ಕಾರ್ಯಕ್ರಮ ಇರಲಿದೆ.
೪ರಂದು ಬೆಳಿಗ್ಗೆ ೧೦ ಗಂಟೆಗೆ ವಿದುಷಿ ಸ್ಮಿತಾ ಶ್ರೀಕಿರಣ್ ನಿರ್ದೇಶನದಲ್ಲಿ ವೇಣುವಾದನ ತರಂಗ, ವಿದ್ವತ್ ಗೋಷ್ಠಿಯಲ್ಲಿ ಡಾ.ಮೀರಾ ರಾಜಾರಾಂ ಪ್ರಾಣೇಶ್, ವಿದ್ವಾನ್ ವಿ.ನಂಜುಂಡಸ್ವಾಮಿ ಭಾಗವಹಿಸಲಿದ್ದಾರೆ. ಸಂಜೆ ೫.೩೦ಕ್ಕೆ ಜಿ.ಕೆ.ಮನಮೋಹನ್ ಅವರಿಂದ ಗಾಯನ, ಸಂಜೆ ೬.೩೦ಕ್ಕೆ ಡಾ.ಜಯಂತಿ ಆರ್.ಕುಮರೇಶ್ ಅವರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ.
೫ರಂದು ಬೆಳಿಗ್ಗೆ ೧೦ ಗಂಟೆಗೆ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಅವರ ಶಿಷ್ಯವೃಂದದಿಂದ ವೇಣುವಾದನ ಕಾರ್ಯಕ್ರಮ ಇದೆ. ವಿದ್ವತ್ ಗೋಷ್ಠಿಯಲ್ಲಿ ವಿದ್ವಾನ್ ಎನ್.ಆರ್.ಪ್ರಸಾದ್, ಸಮನ್ವಯಕಾರರಾಗಿ ಪ್ರೊ.ಜಿ.ಎಸ್.ರಾಮಾನುಜಂ ಭಾಗವಹಿಸುವರು. ಸಂಜೆ ೫.೩೦ಕ್ಕೆ ರಾವ್ ಆರ್.ಶರತ್ ಗಾಯನ, ಸಂಜೆ ೬.೩೦ಕ್ಕೆ ರಾಮಕೃಷ್ಣ ಮೂರ್ತಿ ಗಾಯನ ಕಾರ್ಯಕ್ರಮ ಇರಲಿದೆ.
೬ರಂದು ಸಂಜೆ ೫ ಗಂಟೆಗೆ ಪ್ರಜ್ವಲ್ ರಂಗರಾಜನ್ ಮತ್ತು ತಂಡದಿಂದ ವೀಣೆ, ಸಂಜೆ ೬ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಮ್ಮೇಳನಾಧ್ಯಕ್ಷರಾದ ವಿ.ನಂಜುಂಡಸ್ವಾಮಿ ಅವರಿಗೆ ಸಂಗಿತ ವಿದ್ಯಾನಿಧಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಗೀತ ವಿದ್ವಾಂಸ ಎಚ್.ಕೆ.ವೆಂಕಟರಾಮ್ ಸಮಾರೋಪ ಭಾಷಣ ಮಾಡಲಿದ್ದು, ಸಂಗೀತ ವಿದ್ಯಾನಿಧಿ ಮೈಸೂರು ಎಂ.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೭ ಗಂಟೆಗೆ ಎಂ.ಬಿ.ಹರಿಹರನ್ ಮತ್ತು ಎಸ್.ಅಶೋಕ್ ಸಹೋದರರಿಂದ ಯುಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ