ಮೈಸೂರು : ನಗರದ ಸರಸ್ವತಿಪುರಂನಲ್ಲಿರುವ ಎನ್ಎಸ್ಎಸ್ ಭವನದಲ್ಲಿಂದು ವನಸಿರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಮೈಸೂರು ವಿಶ್ವವಿದ್ಯಾನಿಲಯ – ಎನ್ಎಸ್ಎಸ್ ಘಟಕ, ಯುವ ಸಬಲೀಕರಣ, ಎ ಎಸ್ ಜಿ ಕಣ್ಣಿನ ಆಸ್ಪತ್ರೆ ಮತ್ತು ರೋಟರಿ ಜಯಪ್ರಕಾಶ್ ನಗರ ವಲಯ 7, ಮೈಸೂರು ಇವರುಗಳ ಸಹಯೋಗದಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು
ಶಿಬಿರದಲ್ಲಿಸುಮಾರು 100 ರಿಂದ 125 ಶಿಬಿರಾರ್ಥಿಗಳಿಗೆ ತಪಾಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಜಯಪ್ರಕಾಶ್ ನಗರ ಅಧ್ಯಕ್ಷರಾದ ಡಾ. ನಂಜುಂಡಸ್ವಾಮಿ, ಕಾರ್ಯಕ್ರಮ ಸಂಯೋಜನ ಅಧಿಕಾರಿಯಾದ ಎಂ ಸುರೇಶ, ಪ್ರೊ. ಎಂ.ರುದ್ರಯ್ಯ, ಪ್ರೊ.ಕಾಳಚೆನ್ನಗೌಡ, ಡಾ. ಓಂ ಪ್ರಕಾಶ, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ದೊಡ್ಡ ರಾಸಯ್ಯ, ಡಾ. ನಿಂಗರಾಜು ಆರ್, ಡಾ. ಮಹೇಶ್, ಡಾಕ್ಟರ್ ಮಧುಸೂದನ್ ಪಿಎಸ್, ಡಾ. ರಮೇಶ್, ಡಾ. ಕೃಷ್ಣಪ್ಪ, ವನಸಿರಿ ಟ್ರಸ್ಟಿನ ಕಾರ್ಯದರ್ಶಿಯಾದ ಸಂತೋಷ್ ಎನ್, ಎಎಸ್ ಜಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಮುಜೀರ್ ಸೇರಿದಂತೆ ಪ್ರದೀಪ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.





