ಅಟೋ- ಲಾರಿ ನಡುವೆ ಡಿಕ್ಕಿ ನಾಲ್ವರಿಗೆ ಗಾಯ ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರೇಪುರ ಗೇಟ್ ಸಮೀಪ ಲಾರಿ ಮತ್ತು ಪ್ಯಾಸೆಂಜರ್ ಅಟೋ ನಡುವೆ ಡಿಕ್ಕಿಯಾದ ಪರಿಣಾಮ ಅಟೋದಲ್ಲಿ ಇದ್ದ ಮೈಸೂರು ಮೂಲದ ಅರುಣ್ ಬಿನ್ ದೊರೆಸ್ವಾಮಿ, ಶರವಣ ಬಿನ್ ಲೋಕನಾಥ್, ಕೃಷ್ಣ ಬಿನ್ ಮುತ್ತುಕೃಷ್ಣ, ದರ್ಶನ್ ಬಿನ್ ದಿಲೀಪ್ ಗೌಸಿಯಾ ನಗರ ಮೈಸೂರು ಈ ನಾಲ್ವರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಲಾರಿಯನ್ನು ಹಾಗೂ ಅಟೋ ವಶಕ್ಕೆ ಪಡೆದಿದ್ದು ಲಾರಿ ಚಾಲಕ ಪರಾರಿಯಾಗಿದ್ದಾನೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Tags: ಅಟೋ- ಲಾರಿಗುಂಡ್ಲುಪೇಟೆಚಾಮರಾಜನಗರಬೇಗೂರುಬೇಗೂರು ಪೊಲೀಸ್ ಠಾಣೆ
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ : ಸಿಎಸ್ಕೆ ವಿರುದ್ಧ ಆರ್ಆರ್ಗೆ ಗೆಲುವು March 30, 5:56 PM Byಆಂದೋಲನ ಡೆಸ್ಕ್