Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಉಳುಮೆ ಮಾಡೋ ರೈತನ ಮೇಲೆ ಕ್ರಿಮಿನಲ್ ಕೇಸ್ ಹಾಕಬಾರದು : ಸಚಿವ ಆರ್‌ ಅಶೋಕ್‌

ಗ್ರಾಮ ವಾಸ್ತವ್ಯ ಎಂಬುದೊಂದು ಪಾಠ ಶಾಲೆ

ಮೈಸೂರು : ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುವ ರೈತನ ಮೇಲೆ ಯಾವುದೇ ಕಾರಣಕ್ಕೂ ಕ್ರಿಮಿನಲ್ ಕೇಸ್ ಹಾಕಬಾರದು ಎಂದು ಕಂದಾಯ ಸಚಿವರಾದ ಆರ್. ಅಶೋಕ ಹೇಳಿದರು
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ತಾಲೂಕು ಆಡಳಿತ ಹೆಚ್. ಡಿ.ಕೋಟೆ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ಸರ್ಕಾರಿ ಜಮೀನಿನಲ್ಲಿ ಅಥವ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಒಂದು ರೀತಿ ಭೂ ಕಬಳಿಕೆದಾರರು ಎಂಬಂತೆ ನೋಡಲಾಗುತಿತ್ತು ಅವರುಗಳು ಮೇಲೆ ಕೇಸ್ ದಾಖಲಿಸಿ ರೈತರು ಬೇಲ್ ಗಾಗಿ ಕೋರ್ಟಿಗೆ ಅಲೆಯಬೇಕಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ ಎಂದರು.
ಮೈಸೂರು ಜಿಲ್ಲೆಯ 3060 ರೈತರಿಗೆ 2.55 ಕೋಟಿ ಬೆಳೆ ಹಾನಿ ಪರಿಹಾರ ನೀಡಲಾಗಿದೆ,5640 ಮನೆ ಹಾನಿ ಪ್ರಕರಣಗಳಲ್ಲಿ 45 ಕೋಟಿ ಹಾಗೂ ಕೋವಿಡ್ ನಿಂದ ಮೃತಪಟ್ಟ 3664 ಕುಟುಂಬದವರಿಗೆ 27.35 ಕೋಟಿ ಪರಿಹಾರ ವಿತರಿಸಲಾಗಿದೆ ಎಂದರು.
ವೃದ್ದಾಪ್ಯ ವೇತನ ಪಡೆಯಲು ಆಗುತಿದ್ದ ವಿಳಂಬ ತಪ್ಪಿಸಿ ದೂರವಾಣಿ ಮುಖಾಂತರ ‘ ಹಲೋ ಕಂದಾಯ ಸಚಿವರೇ ಎಂದು ಕರೆ ಮಾಡುವ ಮೂಲಕ ಕೇವಲ 72 ಗಂಟೆಯೊಳಗಾಗಿ ವೃದ್ದಾಪ್ಯ ಪಿಂಚಣಿ ಪಡೆಯಬಹುದಾಗಿದೆ ಎಂದರು. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳವರು ಮನೆ ಕಟ್ಟಲು ಭೂ ಪರಿವರ್ತನೆಗಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ,ಜಿಲ್ಲಾಧಿಕಾರಿಗಳ ಹಂತದಲ್ಲಿ ಕೇವಲ 7 ದಿನದಲ್ಲಿ ಭೂ ಪರಿವರ್ತನೆ ಆಗಲಿದೆ ಹಾಗೂ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟುವವರಿಗೆ ಆ ಜಾಗದ ಮಾಲೀಕತ್ವವನ್ನು 94 ಸಿ ಅಡಿ ನೀಡಲಾಗುವುದು.

ಜಿಲ್ಲಾಧಿಕಾರಿಗಳು,ತಿಂಗಳಿಗೊಮ್ಮೆ ಗ್ರಾಮಗಳಿಗೆ ತೆರಳಿ ಊರಿನ ಅಂಗನವಾಡಿಯಲ್ಲಿ ಊಟ ಮಾಡಿ, ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಮಾಡಿ ಸ್ಥಳದಲ್ಲಿಯೇ ಗ್ರಾಮದ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲೆಂದೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿದ್ದು ಸಮಸ್ಯೆಗಳ ಅರಿಯಲು ,ಸಮಸ್ಯೆಗಳ ಪರಿಹರಿಸುವ ಒಂದು ಪಾಠ ಶಾಲೆಯಿದ್ದಂತೆ ಈ ಗ್ರಾಮ ವಾಸ್ತವ್ಯ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ