Mysore
15
scattered clouds

Social Media

ಬುಧವಾರ, 07 ಜನವರಿ 2026
Light
Dark

ಕಾಡೆಮ್ಮೆ ಬೇಟೆ :ಇಬ್ಬರ ಬಂಧನ

ಮೈಸೂರು : ಮೈಸೂರು ಹಾಗೂ ವೀರಾಜಪೇಟೆ ರಸ್ತೆಗೆ ಹೊಂದಿಕೊಂಡಂತಿರುವ ಕಚುವಿನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡೆಮ್ಮೆಯನ್ನು ಭೇಟೆಯಾಡಿ ಅದರ 4 ತೊಡೆಗಳು ಹಾಗೂ ಎಡ ದೇಹದ ಭಾಗಗಳನ್ನು ಕತ್ತರಿಸಿಕೊಂಡು  ಪರಾರಿಯಾಗಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ  ಯಶಸ್ವಿಯಾಗಿದ್ದಾರೆ.

ಆರೋಪಿಗಳು ಕಚುವಿನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ದಿನಾಂಕ 15/10/2022 ರಂದು ರಾತ್ರಿ  ಒಟ್ಟು 9 ಜನ ಆರೋಪಿಗಳು ಸೇರಿ ಕಾಟಿಯನ್ನು ಭೇಟೆಯಾಡಿದ್ದರು. ಈ ಸಂಬಂಧ ದೂರು ದಾಖಲಾಗಿದ್ದು ಕಾರ್ಯಾಚರಣೆಯನ್ನು ಕೈಗೊಂಡ ಅಧಿಕಾರಿಗಳಾದ ಉಪಾರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್‌ ದಯಾನಂದ ಅವರ ಮಾರ್ಗದರ್ಶನದೊಂದಿಗೆ ಹುಣಸೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ರತನ್‌ ಕುಮಾರ್‌ ಹಾಗೂ ಆನೆ ಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳಾದ ಗಣರಾಜ ಪಟಗಾರ ಹಾಗೂ ಹುಣಸೂರು ವನ್ಯಜೀವಿ ವಲಯದ ಸಿಬ್ಬಂದಿಗಳು ವಿಶೇಷ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿಗಳೊಂದಿಗೆ ತನಿಖೆ ಕೈಗೊಂಡು  ಘಟನೆಯ ಸಂಬಂಧ ಇಬ್ಬರು ಆರೋಪಿಗಳಾದ ಚಂದ್ರ ಅಲಿಯಾಸ್‌ ಕಾಟಿ ಚಂದ್ರ, ಅಶೋಕ್‌ ಲಕ್ಷಮೀಪುರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಉಳಿದ  7 ಜನ ಆರೋಪಿಗಳಾದ ಮನು,ಬೊಮ್ಮ, ಭರತ್‌, ಆನಂದ್‌, ಶೇಷಮ್ಮನ ಜಯ, ರಾಮಕೃಷ್ಣೆಗೌಡ, ಮಂಜು ಇವರುಗಳನ್ನು ಬಂಧಿಸಲು ಪ್ರಯತ್ನದಲ್ಲಿ ತೊಡಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!