Mysore
21
overcast clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ವೈಯಕ್ತಿಕ ತೇಜೋವಧೆ ಬಿಟ್ಟು ಸಂಘಟನೆಯತ್ತ ಗಮನ ಹರಿಸಿ : ಗೋಪಾಲ್

ಹನೂರು :ವೈಯಕ್ತಿಕ ತೇಜೋವದೆ ಬಿಟ್ಟು ನಾವೆಲ್ಲರೂ ಒಂದು ಎಂದು ತೋರಿಸುವ ಮೂಲಕ ನಮ್ಮ ಸಂಘಟನೆ ಬೆಳೆಯಬೇಕು.ನಾವು ಕೂಡ ಈ ಸಂಘಟನೆ ಬೆಳೆಯಲು ಶಕ್ತಿ ಮೀರಿ ಸಹಕಾರ ಕೊಡುತ್ತೇನೆ ಎಂದು ಸಿ ಬಿ ಐ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹೇಳಿದರು..

ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಛಲವಾದಿ ತಾಲೂಕು ಸಮಿತಿಯ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಸಂಘಟನೆ ಸದಸ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಸರ್ಕಾರಿ ನೌಕರರನ್ನು ತಾವು ಪಟ್ಟಿಯನ್ನು ತಯಾರಿಸಬೇಕು. ಕೆ ಶಿವರಾಮ್ ರವರು ಪ್ರಸ್ತುತ ಅಧ್ಯಕ್ಷರಾಗಿದ್ದು ಉದಾತ್ತ ಉದ್ದೇಶ ಇಟ್ಟುಕೊಂಡು ಮಹಾಸಭಾ ಮಾಡಿದ್ದಾರೆ.. ಬಾಬಾ ಸಾಹೇಬರ ಉದ್ದೇಶ ಏನಿತ್ತು ಅದು ದುರದೃಷ್ಟ ಅವರ ಉದ್ದೇಶ ಮಾಯಾವಾಗುತ್ತಿದೆ ಕಾರಣ ಜಾತಿವಾರು ಮಠಗಳು ಮಾಡಿ ತಮ್ಮ ಪ್ರಾಮುಖ್ಯತೆ ತೋರಿ ಸರ್ಕಾರದ ಮೇಲೆ ಪ್ರಭಾವ ಬೀರಿ ಅನುಕೂಲ ಪಡೆದುಕೊಳ್ಳುತ್ತಿದ್ದೂ ಇದು ದುರದೃಷ್ಟ ಎಂದರು.
ಈ ವ್ಯವಸ್ಥೆಯಲ್ಲಿ ಸಹಬಾಳ್ವೆಯಿಂದ ನಡೆಯಬೇಕು ಜನಸಂಖ್ಯೆಯಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರು ಸಹ ಮೀಸಲಾತಿ ಅನುಕೂಲತೆಯಿಂದ ವಂಚಿತರಾಗುತ್ತಿದ್ದೇವೆ. 101 ಜಾತಿಯಲ್ಲಿ ಎರಡು ಮೂರು ಜನಾಂಗ ಬಿಟ್ಟರೆ ಉಳಿದ ಯಾರು ಸಹ ಪರಿಶಿಷ್ಟ ಜಾತಿ ಎಂದು ಗುರುತಿಸಿಕೊಳ್ಳಲ್ಲ ಆದರೇ ಸೌಲಭ್ಯಗಳನ್ನ ಮಾತ್ರ ಹೆಚ್ಚು ಪಡೆದುಕೊಳ್ಳತ್ತಿದ್ದಾರೆ.
ದಲಿತರು ಅವರ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ ಎಂದರೆ ಹಿಂದೆ ನಮ್ಮ ಪೂರ್ವಜರು ಹಾಕಿದ ಹೆಜ್ಜೆ.. ನಮ್ಮ ಛಲವಾದಿ ಬಂದುಗಳು ಈಗೇ ಮುಂದಿನ ದಿನಗಳಲ್ಲಿ ಸಹ ಒಗ್ಗಟ್ಟಾಗಿರಬೇಕು…ನಮ್ಮ ಜನಾಂಗದ ಜನ ಯಾವ ಪಕ್ಷಕ್ಕಾದರೂ ಹೋಗಲಿ ಆದ್ರೆ ಜನಾಂಗದ ಏಳ್ಗೆಗಾಗಿ ದುಡಿಯಬೇಕು. ಶೋಷಿತ ಜನಾಂಗಕ್ಕೆ ದುಡಿದ ಶಿವರಾಮ್ ರವರು ಶಕ್ತಿಯನ್ನು ಮೀರಿ ದುಡಿದಿದ್ದಾರೆ ಎಂದರು..

ಡಿ ವೈ ಎಸ್ ಪಿ ಹೆಚ್ ಕೆ ಮಹಾನಂದ್ ಮಾತನಾಡಿ ಛಲ ಮತ್ತು ವಾದ ಎರಡು ಇದ್ದಾಗ ಮಾತ್ರ ಬಲ ಸಾಧ್ಯ..ನಮ್ಮ ಸಂಘಟನೆಯಲ್ಲಿ ಎಡ ಬಲ ಎರಡು ಸಹ ಒಂದಾಗಬೇಕು. ಅಲ್ಲದೆ ಮಹಾನ್ ವ್ಯಕ್ತಿ ಗಳನ್ನು ಒಂದು ಸಮಾಜಕ್ಕೆ ಸೀಮಿತ ಮಾಡಬಾರದು.ಸಮಾನ ಮನಸ್ಕರಾದಾಗ ಮಾತ್ರ ಅಭಿವೃದ್ಧಿ ಸಾಧ್ಯ… ಬಾಬಾ ಸಾಹೇಬರು ಕೊಟ್ಟಂತಹ ಋಣದಿಂದ ಮಾತ್ರ ಇದು ಸಾದ್ಯ ಎಂದರು.

ಇದೆ ಸಂದರ್ಭದಲ್ಲಿ ಉಪ ನೊಂದಣಾಧಿಕಾರಿ ಶಿವಶಂಕರ ಮೂರ್ತಿ, ಗುತ್ತಿಗೆದಾರ ಓಲೆ ಮಹಾದೇವ, ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಡಿ ದೇವರಾಜು, ಛಲವಾದಿ ಮಹಾಸಭಾದ ಕಾರ್ಯದರ್ಶಿ ಹಂಸರಾಜು, ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಕನಕರಾಜು, ಮಾದೇಶ್, ಗುಂಡಾಪುರ ಸೋಮಣ್ಣ, ಸುಶೀಲ, ಶಿವನಂಜಯ್ಯ, ಯಜಮಾನರಾದ ಸಿದ್ದರಾಜು, ಚಿಕ್ಕಣ್ಣ,ಇನ್ನಿತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!