Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಿಡಿಲು ಬಡಿತದಿಂದ ಮಹಿಳೆ ಆಸ್ಪತ್ರೆಗೆ ದಾಖಲು, ಆರೋಗ್ಯ ವಿಚಾರಿಸಿದ ಶಾಸಕರು

ಹನೂರು : ತಾಲೂಕಿನ ಪೊನ್ನಾಚಿ ಸಮೀಪದ ರಾಮೇಗೌಡನ ದೊಡ್ಡಿಯಲ್ಲಿ ಭಾನುವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಿಡಿಲು ಬಡಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಜಡೇಮಾದಮ್ಮ ಎಂಬವರು ಬೆಳಗ್ಗೆ ಜಮೀನಿನಲ್ಲಿ ಕಳೆ ತೆಗೆಯುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಸಿಡಿದು ಬಡಿದ ಪರಿಣಾಮ ಕೈ, ಕಾಲು ಸ್ವಾಧೀನ ಕಳೆದುಕೊಂಡು ನಿತ್ರಾಣಗೊಂಡರು. ಬಳಿಕ ಕುಟುಂಬಸ್ಥರು ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ಕೊಡಿಸಿ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಭೇಟಿ: ಸುದ್ದಿ ತಿಳಿದು ಶಾಸಕ ಆರ್.ನರೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದು ಆರೋಗ್ಯ ಕ್ಷೇಮವನ್ನು ವಿಚಾರಿಸಿದರು. ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಜಡೇಮಾದಮ್ಮ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ