ಕುಶಾಲನಗರ : ಚಾಕು ಇರಿದು ಪತ್ನಿಯ ಹತ್ಯೆಗೆ ಯತ್ನಿಸಿದ ಘಟನೆ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಸುಂದರನಗರ
ಗ್ರಾಮದಲ್ಲಿ ಬುಧವಾರ ನಡೆದಿದೆ.
ಸುಂದರನಗರದ ರಾಜೇಶ್(೩೪) ಚಾಕುವಿನಿಂದ ಇರಿದ ವ್ಯಕ್ತಿ. ಕೌಟುಂಬಿಕ ಕಲಹ ತಾರಕ್ಕಕೇರಿ ರಾಜೇಶ್ ತನ್ನ ಪತ್ನಿ ಜ್ಯೋತಿ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಪತ್ನಿಗೆ 9 ಕಡೆ ಗಾಯಗಳಾಗಿದ್ದು, ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜೇಶನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿ, ಕೊಲೆ ಯತ್ನ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.





