ಮೈಸೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರ ಸರವನ್ನು ಉಪಾಯವಾಗಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
‘ಫೇಸ್‌ಬುಕ್‌ನಲ್ಲಿ ಪರಿಚಯವಾದ ಬಳ್ಳಾರಿ ಮೂಲದ ಸಂತೋಷ್ ಹೆಸರಿನ ವ್ಯಕ್ತಿಯು ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಡಿ.1ರಂದು ಮೈಸೂರಿಗೆ ಬಂದಿರುವುದಾಗಿ ತಿಳಿಸಿ, ಭೇಟಿಯಾಗುವಂತೆ ತಿಳಿಸಿದರು. ರೈಲ್ವೆ ನಿಲ್ದಾಣದ ಬಳಿ ಬಂದು, ನನ್ನನ್ನು ಆಟೊದಲ್ಲಿ ಲಾಡ್ಜ್‌ಗೆ ಕರೆದೊಯ್ದು. ದಾರಿಮಧ್ಯದಲ್ಲಿ ನನ್ನಲ್ಲಿದ್ದ 62 ಗ್ರಾಂ ಚಿನ್ನದ ಸರ ವನ್ನು ಪರ್ಸ್‌ನಲ್ಲಿ ಹಾಕಿಕೊಳ್ಳುವಂತೆ ತಿಳಿಸಿದನು. ನಂತರ ಲಾಡ್ಜ್‌ಗೆ ಕರೆದೊಯ್ದು, ಅಲ್ಲಿ ಲೈಂಗಿಕ ಕಿರುಕುಳ ನೀಡಿದ. ಆದಾದ ಬಳಿಕ, ನಾನು ಮುಖ ತೊಳೆಯಲು ಒಳಗೆ ಹೋದ ವೇಳೆ ಪರ್ಸ್, ಮೊಬೈಲ್ ಕದ್ದೊಯ್ದು ಅಲ್ಲಿಂದ ಪರಾರಿಯಾಗಿದ್ದ’ ಎಂದು
ಹೆಬ್ಬಾಳದ ಬಸವನಗುಡಿಯ ಮಹಿಳೆಯೊಬ್ಬರು ಲಷ್ಕರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





