ಮೈಸೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಗೆ ಯಾವ ಹೆಸರನ್ನಾದರೂ ಇಡಲಿ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಗೆ ಹೆಸರು ನಾಮಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಹೆಸರು ಇಡುವುದು ಸರ್ಕಾರದ ಅಧಿಕಾರ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕಾವೇರಿ ನದಿಯ ಹೆಸರಿಡಬೇಕು ಎಂದು ಚರ್ಚೆಯಾಗುತ್ತಿದೆ. ಎರಡು ಸಲಹೆಗಳೂ ಚೆನ್ನಾಗಿವೆ. ಸರ್ಕಾರ ಯಾವುದಾದರೂ ಇಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಬೇಗ ಕೆಲಸ ಮುಗಿಸಿ ಹೆಸರು ಇಡಲಿ ಎಂದು ಹೇಳಿದರು.





