ಪರೀಕ್ಷೆ ಬರೆಯಲು ಸ್ವಗ್ರಾಮಕ್ಕೆ ಬಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ದುರ್ಘಟನೆ
ಮಂಡ್ಯ: ಪರೀಕ್ಷೆ ಬರೆಯಲು ರಜೆ ಮೇಲೆ ಬಂದಿದ್ದ ಯೋಧನ ಮೇಲೆ ಲಾರಿ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕಾರಿಮನೆ ಗೇಟ್ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನರಸಯ್ಯ ಅವರ ಪುತ್ರ ಮಿಲ್ಟಿç ಕುಮಾರ್ (೩೪) ಮೃತ ಯೋಧ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ ಮಿಲ್ಟಿç ಕುಮಾರ್ ಅವರು ಮಂಡ್ಯದಲ್ಲಿ ಪರೀಕ್ಷೆ ಬರೆಯುವ ಸಲುವಾಗಿ ಸ್ವಗ್ರಾಮ ಸಾತನೂರಿಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ ತಂದೆಯೊAದಿಗೆ ಸಾತನೂರಿನಿಂದ ಮಂಡ್ಯಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕಾರಿಮನೆ ಗೇಟ್ ಬಳಿ ಬೈಕ್ ಸವಾರನೊಬ್ಬ ದೊಡ್ಡ ಗುಂಡಿಯೊAದನ್ನು ತಪ್ಪಿಸಲು ತನ್ನ ಬೈಕನ್ನು ಎಡಕ್ಕೆ ಚಲಿಸಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಕುಮಾರ್ ಅವರ ಬೈಕ್ ಮುಂದೆ ಹೋಗುತ್ತಿದ್ದ ಬೈಕ್‌ಗೆ ತಗುಲಿ ಕುಮಾರ್ ನೆಲಕ್ಕೆ ಉರುಳಿದ್ದಾರೆ. ಈ ಸಂದರ್ಭ ಕಾಯಿ ಮೊಟ್ಟೆ ತುಂಬಿಕೊಂಡು ಮಂಡ್ಯ ಕಡೆಗೆ ಬರುತ್ತಿದ್ದ ಲಾರಿ ಕುಮಾರ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದರು.
ಕುಮಾರ್ ಅವರ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





