Mysore
27
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಅಂತ್ಯಕ್ರಿಯೆ; ಸಾಂಸ್ಕೃತಿಕ ರಾಯಭಾರಿ ಇನ್ನು ನೆನಪು ಮಾತ್ರ

ಕಾಡಾನೆಯೊಂದನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಜುನ ಬಲಿಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ರಾಜ್ಯದ ಜನತೆ ಅರ್ಜುನನಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಒಟ್ಟು ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿರುವ ಕೀರ್ತಿ ಸಂಪಾದಿಸಿದ್ದ ಅರ್ಜುನ ಆನೆ ಸಾವಿನ ಬಗ್ಗೆ ವಿವಾದಗಳೂ ಸಹ ಹುಟ್ಟಿಕೊಳ್ಳುತ್ತಿವೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಜನಸಾಮಾನ್ಯರು ಹಾಗೂ ಮಾವುತರು ಕಿಡಿಕಾರಿದ್ದಾರೆ.

ತೀವ್ರವಾಗಿ ಗಾಯಗೊಂಡು ಅಸುನೀಗಿದ ಅರ್ಜುನನಿಗೆ ಹಾಸನ ಜಿಲ್ಲೆಯ ಸಕಲೇಶಪುರದ ಬಳಿಯ ದಬ್ಬಳ್ಳಿಕಟ್ಟೆಯಲ್ಲಿರುವ ಕೆಎಫ್‌ಟಿಸಿ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಅರ್ಜುನನ ಮಾವುತ ವಿನು ಇನ್ನೆಂದೂ ಬಾರದ ಅರ್ಜುನನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತು ಅರ್ಜುನನ ಜತೆ ತನ್ನನ್ನೂ ಸಹ ಮಣ್ಣು ಮಾಡಿ ಎಂದು ಗೋಳಿಡುತ್ತಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!