ಮಳವಳ್ಳಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು ಒಂದು ಎಕರೆಯಷ್ಟು ಕಬ್ಬು ಸುಟ್ಟು ಕರಕಲುಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹೊಸಕೊಪ್ಪಲು ಗ್ರಾಮದ ರಾಜಣ್ಣ ಎಂಬುವವರಿಗೆ ಸೇರಿದ ಕಬ್ಬಿನಗದ್ದೆ ವಿದ್ಯುತ್ ಟ್ರಾನ್ಸ್ ಫಾರಂ ನಿಂದ ಕಬ್ಬಿನ ಗದ್ದೆಗೆ ಬೆಂಕಿಯಕಿಡಿ ಬಿದ್ದ ಈ ಘಟನೆ ನಡೆದಿದೆ.
ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ಅಧಿಕಾರಿ ನಾಗರಾಜು ನೇತೃತ್ವದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ವೇಳೆ ಅಗ್ನಿ ಶಾಮಕ ಅಧಿಕಾರಿ ನಾಗರಾಜು ಮಾತನಾಡಿ ಸಾರ್ವಜನಿಕರು ದೂರುನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬರುವಷ್ಟರಲ್ಲಿ ಸುಮಾರು ಕಬ್ಬು ಬೆಂಕಿಗಾಹುತಿಯಾಗಿತ್ತು ನಂತರ ಸಾರ್ವಜನಿಕ ಸಹಕಾರದಿಂದ ಸಿಬ್ಬಂದಿಗಳು ಸೇರಿ ಬೆಂಕಿ ನಂದಿಸಿದರು ಎಂದರು.





