ಹುಣಸೂರು: ವಿದ್ಯುತ್ ಸ್ಪರ್ಶದಿಂದ ಜಾನುವಾರು ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿ ಎಂಬವರಿಗೆ ಸೇರಿದ ಸುಮಾರು ೮೦ ಸಾವಿರ ರೂ. ಬೆಲೆ ಬಾಳುವ ಎಚ್.ಎಫ್.ತಳಿಯ ಇಲಾತಿ ಹಸು ಅಸುನೀಗಿದೆ.
ರೈತ ತಮ್ಮ ಮನೆಯ ಹಿಂಭಾಗ ಪಾಳು ಬಿದ್ದ ಜಾಗದಲ್ಲಿ ಹದುವನ್ನು ಮೇವು ಮೇಯಲು ಕಟ್ಟು ಹಾಕಿದ್ದರು. ಮನೆ ಹಿಂಭಾಗ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲಿ ಕಟ್ಟುವ ಸಮಯದಲ್ಲಿ ವಿದ್ಯುತ್ ಇಲ್ಲದಿದ್ದರಿಂದ ರೈತ ಪಾರಾಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ರೈತ ಹಸುವನ್ನು ನೋಡಲು ಹೋದಾಗ ಹಸು ವಿದ್ಯುತ್ ಸ್ಪರ್ಶಕ್ಕೀಡಾಗಿ ಮೃತಪಟ್ಟಿದ್ದು ತಿಳಿದುಬಂದಿದೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ರೈತ ದೂರು ನೀಡಿದ್ದಾರೆ. ಸ್ಥಳಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.