ದೂರ : ಮೈಸೂರು ತಾಲ್ಲೂಕಿನ ದೂರ ಗ್ರಾಮದಲ್ಲಿ ಚಿರತೆಯೊಂದು ಎರಡು ಮೇಕೆಗಳನ್ನು ಕೊಂದುಹಾಕಿದ್ದು, ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ.
ಗ್ರಾಮದ ಪಶ್ಚಿಮ ಭಾಗದಲ್ಲಿ ನನ್ನಗಳ್ಳಿ ವ್ಯಾಪ್ತಿಗೆ ಬರುವ ಶಿವಕುವಾರ್ ಎಂಬವರ ಜಮೀನಿನ ಹತ್ತಿರ ಮಧ್ಯಾಹ್ನದ ಸಮುಂದಲ್ಲಿ ದೂರ ಗ್ರಾಮದ ಪವನ್ ಎಂಬವರು ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಚಿರತೆ ಎರಡು ಮೇಕೆಗಳ ಮೇಲೆ ದಾಳಿ ನಡೆಸಿದೆ. ಒಂದು ಮೇಕೆ ಅಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೊಂದು ಮೇಕೆ ಕೂಡ ಸ್ವಲ್ಪ ಸಮುಂದ ಬಳಿಕ ಸಾವನ್ನಪ್ಪಿತು. ತಮಗೆ ಪರಿಹಾರ ನೀಡಬೇಕೆಂದು ಪವನ್ ಕೋರಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಈ ಸ್ಥಳದ ಸಮೀಪದಲ್ಲೇ ಇಟ್ಟಿದ್ದ ಬೋನಿಗೆ ಒಂದು ಹೆಣ್ಣು ಚಿರತೆ ಬಿದ್ದಿತ್ತು. ಇತ್ತೀಚೆಗೆ ದೂರ ಗ್ರಾಮದ ಸುತ್ತಮುತ್ತಲೂ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಒಂದೊಂದು ದಿಕ್ಕಿನಲ್ಲಿ ಒಂದೊಂದು ದಿನ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ವರ್ಷದಿಂದೀಚೆಗೆ ಇಲ್ಲಿುಂತನಕ ರೈತರು ಮೂವತ್ತಕ್ಕೂ ಹೆಚ್ಚು ಮೇಕೆ ಹಾಗೂ ಕುರಿಗಳನ್ನು ಕಳೆದುಕೊಂಡಿದ್ದಾರೆ. ದೂರ ಗ್ರಾಮದಲ್ಲಿ ವಾತ್ರವಲ್ಲದೆ ಮುರುಡಗಳ್ಳಿ, ದೊಡ್ಡಕಾಟೂರು, ಟಿ.ಕಾಟೂರು, ವಾರ್ಬಳ್ಳಿ, ವಾರ್ಬಳ್ಳಿ ಹುಂಡಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲೂ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆುಂವರು ಇತ್ತ ಗಮನಹರಿಸಿ ಬೋನನ್ನು ಇಟ್ಟು ಚಿರತೆಗಳನ್ನು ಸೆರೆ ಹಿಡಿುಂಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ..





