ಸೋಮವಾರಪೇಟೆ: ಜೀಪು ಮಗುಚಿ ಚಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ದಿಲೀಪ್(೪೧) ಮೃತ. ಗ್ರಾಮದ ನಡ್ಲಕೊಪ್ಪ ರಸ್ತೆಯಲ್ಲಿ ಜೀಪಿನಲ್ಲಿ ೬ ಚೀಲ ಗೊಬ್ಬರವನ್ನು ಹಾಕಿಕೊಂಡು ಹೋಗುವಾಗ ಏರುರಸ್ತೆಯಲ್ಲಿ ಚಲಿಸುವ ವಾಹನ ಹಿಂದಕ್ಕೆ ಚಲಿಸಿ ಮಗುಚಿಗೊಂಡಿದೆ. ವಾಹದದಡಿಯಲ್ಲಿ ಸಿಲುಕಿದ ದಿಲೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಬ್‌ಇನ್ಸ್‌ಪೆಕ್ಟರ್ ರಮೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.





