Mysore
25
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ಸು

ವಿರಾಜಪೇಟೆ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸು ಒಂದು ಕಂದಕಕ್ಕೆ ಉರುಳಿದ ಘಟನೆ ವಿರಾಜಪೇಟೆ ಅಮ್ಮತಿ ಕಾವಾಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹಾಸನ ಜಿಲ್ಲೆ ಡಿಫ್ಫೋ ವ್ಯಾಪ್ತಿಯ ಸರ್ಕಾರಿ ಬಸ್ಸು ಸಂಖ್ಯೆ ಕೆಎ-೧೩ಎಫ್-೨೩೪೭ ಬಸ್ಸು ಒಂದು ಇಂದು ಮುಂಜಾನೆ ವಿರಾಜಪೇಟೆ ಅಮ್ಮತಿ ಕಾವಾಡಿ ಗ್ರಾಮದ ತಿರುವು ಒಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.

ಸರ್ಕಾರಿ ಬಸ್ಸು ಕೇರಳ ರಾಜ್ಯದ ಎರ್ನಾಕುಲಂ ನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳುತಿದ್ದು ಇಂದು ಮುಂಜಾನೆ ಸುಮಾರು ನಾಲ್ಕರ ಸಮಯದಲ್ಲಿ ವಿರಾಜಪೇಟೆ ಸರ್ಕಾರಿ ಬಸ್ಸು ನಿಲ್ದಾಣ ದಿಂದ ತೆರಳಿದ್ದು. ನಾಲ್ಕು ೨೦ ರ ಸಮಯದಲ್ಲಿ ಕಾವಾಡಿ ಗ್ರಾಮದ ಕಂದಕಕ್ಕೆ ಮಗುಚಿಕೊಂಡಿದೆ. ರಸ್ತೆಯಲ್ಲಿ ದಟ್ಟವಾಗಿ ಮಂಜು ಇದ್ದುದು ಕಾರಣ ಎನ್ನಲಾಗುತ್ತಿದೆ. ರಸ್ತೆ ಬಲಭಾಗದಲ್ಲಿ ಕಿರಿದಾದ ಕೆರೆಯೊಂದಿದ್ದು ಮಂಜಿನಿಂದ ರಸ್ತೆಯು ತೇವಾಂಶದಿಂದ ಕೂಡಿತ್ತು ಎನ್ನಲಾಗಿದೆ. ಈ ವೇಳೆಯಲ್ಲಿ ವಾಹನವು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿತು ಎಂದು ಗಾಯಳು ಒಬ್ಬರು ಮಾಹಿತಿ ನೀಡಿದರು.

ಬಸ್ಸಿನಲ್ಲಿ ಸುಮಾರು ೪೦ ಮಂದಿ ಪ್ರಯಾಣಿಕರು ಇದ್ದರು. ಅವಘಡ ದಿಂದ ಪ್ರಯಾಣಿಕರು ಸೇರಿದಂತೆ ಬಸ್ಸು ಚಾಲಕ ಮತ್ತು ನಿರ್ವಾಹಕರೀಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!