ಮೈಸೂರು: ಜನವರಿ 26ಕ್ಕೆ(ಇಂದಿಗೆ) 56 ವರ್ಷಗಳನ್ನು ಪೂರೈಸುತ್ತಿರುವ ಸಪ್ನ ಬುಕ್‌ಹೌಸ್, ಈ ಪ್ರಯುಕ್ತ ತನ್ನ ಗ್ರಾಹಕರಿಗೆ ಮತ್ತು ಓದುಗರಿಗೆ ಜ.26ರಿಂದ ಫೆ.5ರವರೆಗೂ ಶೇ.50ರಷ್ಟು ರಿಯಾಯಿತಿಯನ್ನು ನೀಡಿದೆ.
1967ರಲ್ಲಿ ಆರಂಭವಾಗಿರುವ ಸಪ್ನ ಬುಕ್‌ಹೌಸ್ ಬೆಂಗಳೂರಿನಲ್ಲಿ 10 ಮತ್ತು ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ ಹೊರ ರಾಜ್ಯಗಳು ಸೇರಿದಂತೆ ಒಟ್ಟು 21 ಶಾಖೆಗಳನ್ನು ಹೊಂದಿದ್ದು, ಪುಸ್ತಕ ಸೇರಿದಂತೆ ಇಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳಿಗೂ ರಿಯಾಯಿತಿಯನ್ನು ನೀಡಲಾಗಿದೆ.





