Mysore
29
clear sky

Social Media

ಭಾನುವಾರ, 18 ಜನವರಿ 2026
Light
Dark

ಇನ್ನೆರಡು ದಿನ ದೀಪಾಲಂಕಾರ: ಸೆಸ್ಕ್ ಸಿಹಿ ಸುದ್ದಿ

ಮೈಸೂರು : ಮೈಸೂರಿಗರಿಗೆ ಮತ್ತು ಮೈಸೂರಿಗೆ ಬರುವ ಪ್ರವಾಸಿಗರಿಗೆ ಇನ್ನೆರಡು ದಿನ ನಗರದ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಅವಕಾಶ ನೀಡುವ ಕಲ್ಪಿಸುವ ಮೂಲಕ ಸೆಸ್ಕಾಂ ಸಿಹಿ ನೀಡಿದೆ.

ದಸರಾ ಮಹೋತ್ಸವದ ಪ್ರಯುಕ್ತ ನಗರದಲ್ಲಿ ಮಾಡಲಾಗಿದ್ದ ವಿದ್ಯುತ್ ದೀಪಾಲಂಕಾರ ಉತ್ತಮ ಪ್ರತಿಕ್ರಿಯೆ ಮತ್ತು ಇನ್ನಷ್ಟು ದಿನಗಳ ಕಾಲ ಮುಂದುವರಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇನ್ನು ಎರಡು ದಿನ ನಗರದ ಹೃದಯ ಭಾಗದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರವನ್ನು ಮುಂದುವರೆಸಲಾಗುತ್ತಿದೆ.

ಇದುವರೆಗೂ ಒಟ್ಟು 17 ದಿನಗಳ ಕಾಲ ದೀಪಾಲಂಕಾರವನ್ನು ಆಯೋಜಿಸುವ ಮೂಲಕ ಸೋಮವಾರಕ್ಕೆ ಅಂತಿಮಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅರಮನೆ ಸುತ್ತಲಿನ ರಸ್ತೆಗಳು, ಚಾಮರಾಜ ಜೋಡಿ ರಸ್ತೆ, ಜೆಎಲ್ಬಿ ರಸ್ತೆಗಳಲ್ಲಿ ಹೆಚ್ಚು ಜನಸಂದಣಿ ಕಂಡು ಬಂತು. ಸಾಕಷ್ಟು ಜನರು ಸಂಭ್ರಮದಿಂದ ದೀಪಾಲಂಕಾರ ನೋಡುವಲ್ಲಿ ನಿರತರಾಗಿದ್ದರು.

ಈ ಹಿನ್ನೆಲೆಯಲ್ಲಿ ‘ಆಂದೋಲನ’ ದಿನಪತ್ರಿಕೆ ಜತೆಗೆ ಮಾತನಾಡಿದ ಸೆಸ್ಕಾಂ ಎಂಡಿ ಜಯವಿಭವಸ್ವಾಮಿ ‘ ಎರಡು ದಿನ ಟ್ರಯಲ್ ಸೇರಿದಂತೆ ಇದುವರೆಗೂ ೧೭ದಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸುಮಾರು ೫ ಕೋಟಿ ರೂ.ಅಷ್ಟು ವೆಚ್ಚವಾಗಿದೆ. ಸಾರ್ವಜನಿಕರಿಂದ ಇನ್ನಷ್ಟು ದಿನಗಳ ಕಾಲ ವೀಕ್ಷಣೆಗೆ ಅವಕಾಶ ನೀಡುವಂತೆ ಸಾಕಷ್ಟು ಒತ್ತಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು, ಇನ್ನೆರಡು ದಿನಗಳ ಕಾಲ ನಗರದ ಹೃದಯ ಭಾಗದಲ್ಲಿ ಮಾತ್ರ ದೀಪಾಲಂಕಾರ ಮುಂದುವರೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!