Mysore
30
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕನ್ನಡ ರಾಜ್ಯೋತ್ಸವ ಅಂಗವಾಗಿ ದೀಪ ಧ್ವನಿ ಆಚರಣೆ

ಮೈಸೂರು: ಮೈಸೂರಿನ ವಿಜಯನಗರದಲ್ಲಿ ನವ ಭಾರತ್ ನಿರ್ಮಾಣ್ ಟ್ರಸ್ಟ್ ವತಿಯಿಂದ ಸೋಮವಾರ ದೀಪ ಧ್ವನಿ ಕಾರ್ಯಕ್ರಮದಲ್ಲಿ ಸಜ್ಜಾಗಿ ಯುವಕರು ಪಂಜು ಹಿಡಿದ್ದರು.

ಭಾನುವಾರ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ದೀಪ ಧ್ವನಿ ಕಾರ್ಯಕ್ರಮದಲ್ಲಿ  ರಘು ಲೀಲಾ ಸಂಗೀತ ಮಂದಿರದ ವಿದ್ಯಾರ್ಥಿಗಳಿಂದ ಸಂಕೀರ್ತನೆ ಹಾಡಿದರು. ಜೊತೆಗೆ, ಕಲಾವಿದರು ಹಾಡುಗಳನ್ನು ಹಾಡಿಕೊಂಡು ಹೆಜ್ಜೆ ಹಾಕಿದರು. ನಗರದ ನಿವಾಸಿಗಳು ತಂತಮ್ಮ ಮನೆಯ‌ ಎದುರು ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಹಣತೆ ಹಚ್ಚಿ ಬರಮಾಡಿಕೊಂಡರು.

ಅಸತೋಮ ಸದ್ಗಮಯ ಸಮಸೋಮ ಜ್ಯೋತಿರ್ಗಮಯ ,ಗುರು ಬ್ರಹ್ಮ ಗುರು ವಿಷ್ಣು ಗುರು ಮಹೇಶ್ವರ ಶ್ಲೋಕಕ್ಕೆ ಮೂವರು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು. ನಂತರ ಬಾರಿಸಯ್ಯ ಗಣಪತಿ ,ಪಾಲಿಸಯ್ಯ ಗಣಮುಖನೇ ಹಾಡಿಗೆ ಮನಮೋಹಕ ನೃತ್ಯ ಪ್ರದರ್ಶನ ಮಾಡಿಕೊಂಡು ಹೆಜ್ಜೆ ಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!