ಚಾಮರಾಜನಗರ: ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡರು ನಗರದಲ್ಲಿ ಮನುಸ್ಮತಿ ಸುಟ್ಟು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತನಕ ಮೆರವಣಿಗೆಯಲ್ಲಿ ತೆರಳಿದರು. ಬಳಿಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ನಂತರ ಮೆರವಣಿಗೆಯಲ್ಲಿ ಮುಖ್ಯದ್ವಾರದ ಮುಂಭಾಗಕ್ಕೆ ತೆರಳಿ ಮನುಸ್ಮೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಮುಖಂಡರಾದ ಯರಿಯೂರು ರಾಜಣ್ಣ, ಸಿ.ಎಂ.ಶಿವಣ್ಣ, ಕೆ.ಎಂ.ನಾಗರಾಜು, ಜಯಂತಿ, ರಂಗಸ್ವಾಮಿ, ಸುಭಾಷ್ ಮಾಡ್ರಳ್ಳಿ, ಮಲ್ಲೇಶ್, ನಂಜುಂಡಸ್ವಾಮಿ, ಕಂದಹಳ್ಳಿ ನಾರಾಯಣ, ಶೇಖರ್, ಆಟೋ ಉಮೇಶ್, ಶಂಕರಮೂರ್ತಿ, ಮಹದೇವಸ್ವಾಮಿ, ಮಹದೇವಯ್ಯ, ಶಿವಣ್ಣ, ಮಲ್ಲಿಕಾರ್ಜುನಯ್ಯ, ಉಮೇಶಕುಮಾರ್ ಇತರರಿದ್ದರು.