ಹನೂರು: ತಾಲ್ಲೂಕಿನ ಮಾರ್ಟಹಳ್ಳಿ ಸಮೀಪ ಕರಡಿ ದಾಳಿಯಿಂದ ತೀವ್ರ ಗಾಯಕ್ಕೊಳಗಾಗಿ ಆಸ್ಪತ್ರೆಗೆ ಸೇರಿರುವ ದನಗಾಹಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಗ್ರಾಮದ ಬೆಳ್ಳಿತಂಬಡಿ ಎಂಬುವರು ಇತ್ತೀಚೆಗೆ ಗ್ರಾಮದ ಬಳಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಕರಡಿ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಚಿಕಿತ್ಸೆಗೆಂದು ಚಾ.ನಗರ ಹೊರವಲಯದ ಸಿಮ್ಸ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ





