ಮೈಸೂರು: ರುದ್ರ ನೃತ್ಯಯೋಗ ಶಾಲಾ, ಇಂಟರ್ ನ್ಯಾಷಿನಲ್ ಫೋರಂ, ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್‌ಫೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಮೈಸೂರು ಒಡಿಸ್ಸಿ ಉತ್ಸವವನ್ನು ಡಿ.೧೦ರಂದು ಆಯೋಜಿಸಲಾಗಿದೆ ಎಂದು ಉತ್ಸವದ ಸಂಚಾಲಕಿ ವಿದುಷಿ ಸಿಂಧೂ ಕಿರಣ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಅಂದು ಸಂಜೆ ೫.೩೦ಕ್ಕೆ ರಾಮಕೃಷ್ಣನಗರದಲ್ಲಿ ಇರುವ ರಮಾಗೋವಿಂದ ರಂಗ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಒಡಿಸ್ಸಿ ನೃತ್ಯ ಮಹೋತ್ಸವದ ಸಂಸ್ಥಾಪಕ ಶಾಮ್ ಹರಿ ಚಕ್ರ, ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಮೈಸೂರಿನ ಭೂಷಣ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್ಸ್‌ನ ಬದರಿ ದಿವ್ಯ ಭೂಷಣ್, ಶ್ರೀಕೃಷ್ಣ ಗಾನ ಸಭಾದ ಅಧ್ಯಕ್ಷ ಶ್ರೀಧರ ರಾಜ ಅರಸ್, ನೃತ್ಯಗಿರಿ ಸ್ಕೂಲ್ ಆಫ್ ಡಾನ್ಸ್ ಅಂಡ್ ರಿಸರ್ಚ್ ಸೆಂಟನರ್‌ನ ಕೃಪಾ ಫಡ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಉತ್ಸವದಲ್ಲಿ ಬೆಂಗಳೂರಿನ ಚೈತ್ರಾ ದಾಸೇಗೌಡ, ಸೋಹಿನಿ ಬೋಸ್ ಬ್ಯಾನರ್ಜಿ, ಅನುಶ್ರೀ ಪದ್ಮನಾಭ, ಬೀದರ್‌ನ ಜ್ಯೋತಿ ಪ್ರವ, ಸಮಂಥರಿ, ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗುರು ಹಾಗೂ ಹೊಸದಿಲ್ಲಿಯ ಓಡಿಸ್ಸಿ ದರ್ಶನ ನೃತ್ಯ ಅಕಾಡೆಮಿಯ ಸುದರ್ಶನ ಸಾಹೋ, ಮೈಸೂರಿನ ರುದ್ರ ನೃತ್ಯಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್ ಮತ್ತು ಅವರ ಶಿಷ್ಯರಾದ ಸಮವೇದ್ ಮೂಲ, ಹರ್ಷ ಪವಿತ್ರನ್, ಪೃಥೆ ಹವಾಲ್ದಾರ್, ಸ್ತುತ್ಯಶ್ರೀ, ಬೆಂಗಳೂರಿನ ಆದಶ್ಯ ಸ್ಕೂಲ್ ಆಫ್ ಒಡಿಸ್ಸಿ ಸಂಸ್ಥೆಯ ನೃತ್ಯ ಗುರು ಸರಿತಾ ಮಿಶ್ರ ಅವರ ಶಿಷ್ಯರಾದ ಅನಹಿತಾ ಗುಂಜೋ, ಸಹನ ಕಕ್ರಾಲ್, ಸಾಯಿ ಸೃಷ್ಟಿರಥ್, ಮಾನಸಿ ನಾಯಕ್, ಇಷಾ ಅನುಜ್ ಸಿಂಘಾಲ್, ಬೆಂಗಳೂರಿನ ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್‌ನ ಸಂಸ್ಥಾಪಕರಾದ ಶರ್ಮಿಳಾ ಮುಖರ್ಜಿ ಹಾಗೂ ಶಿಷ್ಯರಾದ ಸುರ್ಜಿತ್ ಸೋಮ್, ಶ್ರೀರ್ಜಿತ್ ಸನ್ಯಾಲ್, ಬಿ.ಟಿ.ರವಿಶಂಕರ್, ಶ್ವೇತಾ ಶ್ರೀಧರನ್, ನಂದಿತಾ ಭಟ್ಟಾಚಾರ್ಯ, ಶ್ರೆಯಾಂಶಿ ದಾಸ್, ಜಾಹ್ನವಿ ಮುದುಳಿ, ಪ್ರೀತಿ ಬ್ಯಾನರ್ಜಿ ಮೊದಲಾದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ವಿನಯ್ ನರಹರಿ, ಪೃಥೆ ಹವಾಲ್ದಾರ್, ಘನಶಾಮ್ ಪ್ರಧಾನ್, ವೈದ್ಯ, ಓಜಸ್ ಬಳ್ಳೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.