ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋ ಮೂಲಕ ಶುಭ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ, ಹಬ್ಬಕ್ಕೆ ಶುಭ ಕೋರಿರುವ ವಿಡಿಯೋ ಹಂಚಿಕೊಂಡಿದ್ದಾರೆ. ದೀಪಾವಳಿ ಕೇವಲ ಹಬ್ಬವಲ್ಲ ಅದು ನಮ್ಮ ಸಂಸ್ಕೃತಿಯ ಸಾರ, ಇದು ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಸುವ ಪವಿತ್ರವಾದ ದಿನ. ಕತ್ತಲಿಂದ ಬೆಳಕಿಗೆ ಸಮಾಜವನ್ನು ತೆಗೆದುಕೊಂಡು ಹೋಗಬೇಕು ಎಂದು ನಮ್ಮ ಧರ್ಮದಲ್ಲಿ ಸಂಸ್ಕೃತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತೇವೆ. ಈ ಶುಭ ವೇಳೆಯಲ್ಲಿ ಎಲ್ಲರ ಬದುಕಿನಲ್ಲೂ ಹೊಸ ಬೆಳಕನ್ನು ಮೂಡಿ, ನೆಮ್ಮದಿ ಬರಲಿ ಎಂದು ಆಶಿಸುತ್ತೇನೆ.
ರೈತರಿಗೆ ಈ ಬಾರಿ ಬಹಳ ಕಷ್ಟ ಇದೆ.ನಾವೆಲ್ಲರೂ ಬರಗಾಲವನ್ನು ಎದುರಿಸುತ್ತಿದ್ದೇವೆ, ಈ ಕಷ್ಟದಲ್ಲಿ ಎಲ್ಲರ ಬದುಕಿನಲ್ಲೂ ಬದಲಾವಣೆ ಆಗಲಿ ಎಂದು ತುಂಬು ಹೃದಯದಿಂದ ಪ್ರಾರ್ಥನೆ ಮಾಡುತ್ತಿದ್ದೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶೇಷವಾಗಿ ಬೆಳಕಿನ ಹಬ್ಬಕ್ಕೆ ಶುಭ ಕೊರಿದ್ದಾರೆ.