Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಯುವ ಸಂಭ್ರಮಕ್ಕೆ ಸಡಗರದ ತೆರೆ

ಮೈಸೂರು: ವಿಶ್ವವಿಖ್ಯಾತ ದಸರಾ ಪ್ರಯುಕ್ತ ೯ ದಿನಗಳ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಭ್ರಮಕ್ಕೆ ಸಡಗರದ ತೆರೆ ಬಿದ್ದಿತ್ತು.

ಸಂಭ್ರಮದ ಅಂತಿಮ ದಿನವಾದ ಶನಿವಾರ ಇಡೀ ಆವರಣ ಯುವ ಸಮುದಾಯದಿಂದ ಭರ್ತಿಯಾಗಿತ್ತು. ಪ್ರತಿಯೊಂದು ತಂಡದ ನೃತ್ಯವನ್ನು ಪ್ರೇಕ್ಷಕರು ಎಂಜಾಯ್ ಮಾಡಿದರು. ಸಿಳ್ಳೆ, ಚಪ್ಪಾಳೆ ಬಾನೆತ್ತರಕ್ಕೆ ಸದ್ದು ಮಾಡುತ್ತಿದ್ದವು.

ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು. ಯುವ ಸಮೂಹ ಸಾಲಾಗಿ ನಿಂತು ಸ್ಟೆಪ್ ಹಾಕುತ್ತಿದ್ದರು. ನೆರದಿದ್ದ ಪ್ರೇಕ್ಷಕ ವರ್ಗ ವೇದಿಕೆಯಲ್ಲಿನ ನೃತ್ಯ ಪ್ರದರ್ಶನಕ್ಕೆ ಬದಲಾಗಿ ತಮ್ಮ ವಲಯದಲ್ಲೆ ಕುಣಿಯುತ್ತಿದ್ದ ಸಮೂಹವನ್ನು ನೋಡುತ್ತಿದ್ದರು.

ಮೈಸೂರು ಡಿಎಮ್‌ಟ್ರಿನಿಟಿ ಪಿಯು ಕಾಲೇಜು ತಂಡ ದೇಶಭಕ್ತಿ ಸಾರುವ ನೃತ್ಯ ಪ್ರದರ್ಶಿಸಿದರು. ಜಯಲಕ್ಷ್ಮೀಪುರಂನ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜು ತಂಡ ಪ್ರದರ್ಶಿಸಿದ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ನೃತ್ಯ ಎಲ್ಲರನ್ನು ಆಕರ್ಷಿಸಿತು. ಈ ನೃತ್ಯದಲ್ಲಿ ‘ವಂದೇ ಮಾತರಂ’ ಹಾಡಿಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಮೈಸೂರಿನ ಬಸವೇಶ್ವರ ನಗರದ ಎಎಂಬಿ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡ ಭಾರತೀಯ ಸೇನೆಗೆ ನಮನ ಸಲ್ಲಿಸುವ ನೃತ್ಯವನ್ನು ಪ್ರದರ್ಶಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು ತಂಡ ಕನ್ನಡ, ಸಂಸ್ಕೃತಿ ಮತ್ತು ಜಾನಪದ ಕಲೆ ಸಂಬಂಧ ನೃತ್ಯ ಪ್ರದರ್ಶಿಸಿದರು. ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ತಂಡವು ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸುವ ಪದಗಳಿಗೆ ಹೆಜ್ಜೆ ಹಾಕಿದರು. ಸುಮಾರು ೨೫ ತಂಡಗಳು ನೃತ್ಯ ಪ್ರದರ್ಶಿಸಿದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ