ಮೈಸೂರು: ಗ್ರಾಮಾಂತರ ಪ್ರದೇಶದ ಜನರಿಗೆ ಅರಮನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ವೀಕ್ಷಿಸಲು ಆಯೋಜಿಸಿರುವ ದಸರಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸಾರಿಗೆ ಬಸ್ ಗಳಿಗೆ ಪೂಜೆ ಸಲ್ಲಿಸಿದ ನಂತರ ಹಸಿರು ನಿಶಾನೆ ತೋರಲಾಯಿತು. ಜಿಲ್ಲೆಯ ಒಂಬತ್ತು ತಾಲ್ಲೂಕುಗಳಿಂದ ತಲಾ ಮೂರು ಬಸ್ ಗಳಂತೆ ೮೧ ಬಸ್ ಗಳಲ್ಲಿ ಸಾರ್ವಜನಿಕರನ್ನು ಕರೆತಂದು ದರ್ಶನ ಮಾಡಿಸಲಾಯಿತು. ಅರಮನೆ,ಚಾಮುಂಡಿ ಬೆಟ್ಟ,ವಸ್ತುಪ್ರದರ್ಶನ ಮೊದಲಾದ ಸ್ಥಳಗಳನ್ನು
ತೋರಿಸಲಾಗುತ್ತದೆ. ಸಂಜೆ ಅರಮನೆಯ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ ಬಳಿಕ ವಾಪಸು ಊರಿಗೆ ಕರೆದೊಯ್ಯಲಾಗುತ್ತದೆ.ಸಾರ್ವಜನಿಕರು ೫೦ ರೂಪಾಯಿ ಕೊಟ್ಟು ಪಾಸ್ ಪಡೆಯುವುದು ಬಿಟ್ಟರೆ ಉಳಿದಂತೆ ತಿಂಡಿ,ಊಟ ಉಚಿತವಾಗಿ ಕಲ್ಪಿಸಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶಾಸಕ ಎಸ್.ಎ.ರಾಮದಾಸ್, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಆಶೋಕ್ ಕುಮಾರ್ ದಸರಾ ದರ್ಶನಕ್ಕೆ ಚಾಲನೆ ನೀಡಿದರು. ಮೈಸೂರು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಂದಿದವರು ಬಹಳಸಂತೋಷವಾಗಿ ವೀಕ್ಷಣೆಗೆ ಹೊರಟರು




